




ಕೊಪ್ಪಳ, 23 ಫೆಬ್ರವರಿ (ಹಿ.ಸ.):
ಆ್ಯಂಕರ್: 116ನೇ ದಿನದ ಬಲ್ಡೋಟ ಹಟಾವೋ ಧರಣಿಗೆ ಭಾಗ್ಯನಗರ ಶಂಕರಮಠ ಯುವಕ ಸಂಘ ಬೆಂಬಲಿಸಿತು. ಈ ಧರಣಿ ಉದ್ದೇಶಿಸಿ ಗಿರೀಶ್ ಪಾನಘಂಟಿ ಮಾತನಾಡಿ ನಮ್ಮ ಭಾಗ್ಯನಗರ ಸಂಪೂರ್ಣವಾಗಿ ಈ ಬಾರಿ ದೂಳು ಬಾಧಿತವಾಗಿದೆ. ನಮ್ಮ ಗುಡಿಕೈಗಾರಿಕೆಯ ನೇಕಾರಿಕೆ, ಕೂದಲು ಉದ್ದಿಮೆ ಉದ್ಯೋಗ ಕೊಟ್ಟಿವೆ. ಆದರೆ ಇಲ್ಲಿರುವ ಯಾವುದೇ ಬೃಹತ್ ಕಾರ್ಖಾನೆಗಳು ನಮಗೆ ಉದ್ಯೋಗ ಕೊಟ್ಟಿಲ್ಲ. ನಮ್ಮ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರ ನಮ್ಮನ್ನು ಯಾವತ್ತೂ ಕೈಬಿಟ್ಟಿಲ್ಲ. ಈ ಬಲ್ಡೋಟವಾಗಲೀ , 20 ಹಳ್ಳಿ ಬಾಧಿಸುವ ಕಾರ್ಖಾನೆಗಳು ವಿಸ್ತರಣೆ ಆಗುವುದು ಸಾಧ್ಯವೇ ಇಲ್ಲ. ಈಗಿರುವ ಬಲ್ಟೋಟ ಪೆಲೆಟ್ ಘಟಕ ಇಷ್ಟೊಂದು ವಿಷಾನಿಲ ಉಗುಳುವಾಗ ಇನ್ನು 27 ದೂಳು ಚಿಮ್ಮುವ ಕೊಳವೆಗಳು ಬಂದರೆ ದುಷ್ಪರಿಣಾಮ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕಬೇಕು. ನಾವು ಹೋರಾಡಿ ಇದನ್ನು ಓಡಿಸಿದರೆ ನಮ್ಮೆಲ್ಲ ಜೀವ ಉಳಿಯುತ್ತದೆ ಎಂದರು.
24/02/2026 ಮಂಗಳವಾರ ಬಂದ್ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ನಡೆಯುತ್ತದೆ. ಶಾಂತಿಯುತವಾಗಿ ಬಂದ್ ಆಚರಿಸಿ ಸರ್ಕಾರದ ಕಣ್ಣು ತೆರೆಸೋಣ, ನಗರದ ವ್ಯಾಪಾರಿಗಳು ಅಂಗಡಿ ಮುಂಗಟ್ಟು ಗಳನ್ನು ಸ್ವಯಂ ಪ್ರೇರಿತವಾಗಿ ಮಾಡಬೇಕೆಂದು ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.
ಇದೇ ವೇಳೆ ಐತಿಹಾಸಿಕ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಬಲ್ಡೋಟ ಕೊಟ್ಟ ಬೆಂಚ್ ಹಾಗೂ ಟ್ರೀ ಗಾರ್ಡ್ ಕಿತ್ತು ಮರಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಧರಣಿಯಲ್ಲಿ ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಮಾಲಾ ಬಡಿಗೇರ, ಸಾವಿತ್ರಿ ಮುಜುಂದಾರ, ಸರೋಜಾ ಬಾಕಳೆ, ಸೌಮ್ಯ ನಾಲ್ವಾಡ, ಶ್ವೇತಾ ಅಕ್ಕಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ವೀರಣ್ಣ ಕಮತರ್, ರಾಕೇಶ್ ಚೋಪ್ರಾ, ವಿಪಿನ್ ಕುಮಾರ್ ತಾಲೇಡಾ, ಗ್ಯಾನೇಶ ಹ್ಯಾಟಿ, ವಜ್ರೇಶ ಮ್ಯಾಳಿ, ಸಂತೋಷ ಪಾಸ್ತೆ, ಗಂಗಾಧರ ಎನ್, ಶ್ರೀಧರ್ ಹುರಕಡ್ಲಿ, ವಿ.ಬಸವರಾಜ ಅಂಬರದ, ಅಭಿಷೇಕ ದೇವದುರ್ಗ, ವಿಜಯಕುಮಾರ ಹಣಗಿ, ಸುಭಾಸ್ ಎಚ್. ಕಲಾಲ್, ನಾರಾಯಣ ರಾಯದುರ್ಗ, ಅಶ್ವತ್ ರಾಯದುರ್ಗ, ಶಿವರಾಮ ಗೋಟೂರು, ಸಂತೋಷ ಕುಮಾರ ನಾಗಲದಿನ್ನಿ, ಜಿ.ಬಿ.ಪಾಟೀಲ್, ಸಿ.ಬಿ.ಪಾಟೀಲ್, ಡಾ. ಮಂಜುನಾಥ ಸಜ್ಜನ್, ಬಿ.ಜಿ.ಕರಿಗಾರ, ಮಹಾದೇವಪ್ಪ ಮಾವಿನಮಡು, ಡಿ. ಎಂ. ಬಡಿಗೇರ್, ಎಸ್. ಬಿ. ರಾಜೂರ, ಗಂಗಾಧರ ಕಾನಾಪುರ, ಶಂಭುಲಿಂಗಪ್ಪ ಹರಗೇರಿ, ಶರಣು ಗಡ್ಡಿ, ಶರಣು ಶೆಟ್ಟರ್, ಶಾಂತಯ್ಯ ಅಂಗಡಿ, ಈಶಣ್ಣ ಕೊರ್ಲಹಳ್ಳಿ, ಶಿವಪ್ಪ ಜಲ್ಲಿ, ಮಹಾಂತೇಶ ಕೊತಬಾಳ, ಶರಣು ಶೆಟ್ಟರ್, ಎಸ್ ಎಮ್. ಕಂಬಾಳಿಮಠ, ಜಿ.ಪಿ. ಹುಬ್ಬಳ್ಳಿ ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್