


ಹಂಪಿ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬ ಫೆಬ್ರವರಿ 24ರ ಮಂಗಳವಾರ ನಡೆಯಲಿದ್ದು ಡಾ. ಜಿ.ರಾಮಕೃಷ್ಣ, ಪ್ರೊ.ಸಿ. ಮಹದೇವಪ್ಪ ಮತ್ತು ಹೆಚ್.ಸಿ. ಸತ್ಯನ್ ಅವರಿಗೆ ನಾಡೋಜ ಗೌರವವನ್ನು ಪ್ರದಾನ ಮಾಡಲಾಗುತ್ತದೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದ್ದು, ಡಾ. ಜಿ. ರಾಮಕೃಷ್ಣ, ಪ್ರೊ. ಸಿ. ಮಹದೇವಪ್ಪ ಮತ್ತು ಡಾ. ಹೆಚ್.ಸಿ. ಸತ್ಯನ್ ಅವರನ್ನು ನುಡಿಹಬ್ಬದಲ್ಲಿ `ನಾಡೋಜ’ ಗೌರವ ಪದವಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ ಎಂದರು.
ಅಲ್ಲದೇ, ಭಾμÁ ನಿಕಾಯದಿಂದ 62, ಸಮಾಜ ವಿಜ್ಞಾನ ನಿಕಾಯದಿಂದ 43 ಮತ್ತು ಲಲಿತ ಕಲೆಗಳ ನಿಕಾಯದಿಂದ ಇಬ್ಬರು ಸೇರಿ ವಿವಿಧ ವಿಭಾಗಗಳಿಂದ ಒಟ್ಟು 107 ಸಂಶೋಧನಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುತ್ತದೆ.
ಫೆ.24 ರಂದು ಸಂಜೆ 5:30ಗಂಟೆಗೆ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಪಿ.ಎಚ್.ಡಿ. ಪದವಿಗಳನ್ನು ಪ್ರದಾನ ಮಾಡಲಿದ್ದಾರೆ. ಸಂಸ್ಕøತಿ ಚಿಂತಕರಾದ ಡಾ.ಕೆ.ಮರುಳಸಿದ್ದಪ್ಪ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಎಸ್.ಸಿ-26, ಎಸ್.ಟಿ,-19, ಪ್ರವರ್ಗ1-8, 2ಎ-22, 2ಬಿ-01, 3ಎ-4, 3ಬಿ-14, ಸಾಮಾನ್ಯ-13 ಸೇರಿದಂತೆ ಒಟ್ಟು 107 ಸಂಶೋಧನಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪಿಎಚ್.ಡಿ ಪದವಿ ಪಡೆಯಲಿದ್ದಾರೆ. ಇದರಲ್ಲಿ 74 ವಿದ್ಯಾರ್ಥಿಗಳು, 37 ವಿದ್ಯಾರ್ಥಿನಿಯರು ಪದವಿ ಪಡೆಯಲಿದ್ದಾರೆ.
ನಿರ್ಲಕ್ಷಿತ ಬುಡಕಟ್ಟುಗಳ ಬಗ್ಗೆ, ಮಹಿಳೆಯರ ಕಥನ ಸಾಹಿತ್ಯ, ದಲಿತ ಮಹಿಳೆ, ಆದಿಮ, ಲಂಬಾಣಿ, ಹಿಂದುಳಿದ ವರ್ಗ, ರೈತ ಮತ್ತು ಕೃಷಿ, ಇ-ಆಡಳಿತ, ಗ್ರಾಮೀಣಾಭಿವೃದ್ಧಿ, ಜನಪದ ಸಾಹಿತ್ಯ, ಹಿರಿಯ ನಾಗರೀಕರ ವಿಷಯಗಳ ಕುರಿತು ಸಂಶೋಧನೆಗಳು ನಡೆದಿವೆ. ಮುಕ್ರಿ ಬುಡಕಟ್ಟು ಸಮುದಾಯದ ಮೌಖಿಕ ಸಾಹಿತ್ಯದ ಕುರಿತು ಮುಕ್ರಿ ಸಮುದಾಯದ ವಿದ್ಯಾರ್ಥಿಯಾದ ಸಿ.ಪಿ. ಶಿವಚಂದ್ರ ಅವರು ಸಂಶೋಧನೆ ಮಾಡಿದ್ದಾರೆ. ಇವರು ಮುಕ್ರಿ ಸಮುದಾಯದ ಮೊದಲ ಸಂಶೋಧಕ ಎಂಬುದು ವಿಶೇಷ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್