
ನವದೆಹಲಿ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಾತಾವರಣ ಮುಂದುವರಿದಿದೆ. ಅಮೆರಿಕದ ಎಸ್&ಪಿ 500 0.69% ಏರಿಕೆಯೊಂದಿಗೆ 6,909.51 ಅಂಕಗಳಿಗೆ ಹಾಗೂ ನಾಸ್ಡಾಕ್ ಕಾಂಪೋಸಿಟ್ 0.86% ಏರಿಕೆಯಿಂದ 22,877.65 ಅಂಕಗಳಿಗೆ ಮುಕ್ತಾಯಗೊಂಡಿವೆ. ಆದರೆ ಡೌ ಜೋನ್ಸ್ ಕೈಗಾರಿಕಾ ಸರಾಸರಿ ಫ್ಯೂಚರ್ಸ್ 0.65% ಕುಸಿತದಲ್ಲಿದೆ.
ಯುರೋಪಿನಲ್ಲಿ ಎಫಟಿಎಸಿ 100, ಸಿಎಸಿ 40 ಹಾಗೂ ಡಿಎಎಕ್ಸ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.
ಏಷ್ಯಾದಲ್ಲಿ ಹ್ಯಾಂಗ ಸೆಂಗ್ ಇಂಡೆಕ್ಸ್ 2.32% ಏರಿಕೆ ಕಂಡಿದೆ. ಗಿಪ್ಟಿ ನಿಪ್ಟಿ 0.80% ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ. ಜಪಾನ್ ಮತ್ತು ಚೀನಾದಲ್ಲಿ ರಜೆ ಹಿನ್ನೆಲೆಯಲ್ಲಿ ನಿಕ್ಕಿ 225 ಹಾಗೂ ಶಾಂಘೈ ಕಾಂಪೂಸಿಟ್ಟ್ ಸ್ಥಿರವಾಗಿವೆ.
ಒಟ್ಟಾರೆ, ಜಾಗತಿಕ ಮಾರುಕಟ್ಟೆಗಳಿಂದ ಬಂದಿರುವ ಉತ್ತಮ ಸಂಕೇತಗಳು ಏಷ್ಯಾದ ವಹಿವಾಟಿಗೆ ಬಲ ನೀಡಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa