ಫೆ.28ರಂದು ಕೃತಿ ಲೋಕಾರ್ಪಣೆ
ವಿಜಯಪುರ, 23 ಫೆಬ್ರವರಿ (ಹಿ.ಸ.) ಆ್ಯಂಕರ್: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಲ್ಲಮಪ್ರಭುದೇವರ ವಚನ-ನಿರ್ವಚನ ಕೃತಿಯ ಭಾಷಾಂತರ *’ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’* ಸಂಪುಟ 1 ಮತ್ತು 2 ಕೃತಿ ಲೋಕಾರ್ಪಣೆಯನ್ನು ಫೆ.28 ಶನಿವಾರ ಬೆ.10.30ಗಂ. ಬೆಂಗಳೂರಿನ ಜಯನಗರದ ಜೆ.ಎಸ್.ಎಸ್.ಶ
ಫೆ.28ರಂದು ಕೃತಿ ಲೋಕಾರ್ಪಣೆ


ವಿಜಯಪುರ, 23 ಫೆಬ್ರವರಿ (ಹಿ.ಸ.)

ಆ್ಯಂಕರ್: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಲ್ಲಮಪ್ರಭುದೇವರ ವಚನ-ನಿರ್ವಚನ ಕೃತಿಯ ಭಾಷಾಂತರ *’ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’* ಸಂಪುಟ 1 ಮತ್ತು 2 ಕೃತಿ ಲೋಕಾರ್ಪಣೆಯನ್ನು ಫೆ.28 ಶನಿವಾರ ಬೆ.10.30ಗಂ. ಬೆಂಗಳೂರಿನ ಜಯನಗರದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳ ಸಮೂಹದ ಶ್ರೀ ಶಿವರಾತ್ರೀಶ್ವರ ಕೇಂದ್ರದಲ್ಲಿ ಜರುಗಲಿದೆ.

ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ, ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ನ್ಯಾಯಮೂರ್ತಿ ದೀಕ್ಷಿತ್ ಕೃಷ್ಣ ಶ್ರೀಪಾದ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಕೃತಿ ಪರಿಚಯಿಸಲಿದ್ದಾರೆ. ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ, ಡಿ.ಆರ್.ಪಾಟೀಲ ಮುಖ್ಯ ಅತಿಥಿಗಳಾಗಿ ಮತ್ತು ವಿಶೇಷ ಆಹ್ವಾನಿತರಾಗಿ ಡಾ.ಸಿ.ಸೋಮಶೇಖರ, ಸಿ.ಎಸ್.ಷಡಾಕ್ಷರಿ ಆಗಮಿಸಲಿದ್ದಾರೆ.

ವಚನಾಸ್ ಆಫ್ ಅಲ್ಲಮಪ್ರಭು ಕೃತಿಯ 1ನೇ ಸಂಪುಟ ಮೊದಲ ನಾಲ್ಕು ಸ್ಥಲಗಳ ವ್ಯಾಖ್ಯಾನವಾಗಿದ್ದು, 546 ಪುಟಗಳನ್ನು ಹೊಂದಿದೆ. 2ನೇ ಸಂಪುಟ ಉಳಿದ ಎರಡು ಸ್ಥಳಗಳ ವ್ಯಾಖ್ಯಾನವನ್ನು ಒಳಗೊಂಡಿದ್ದು, 822 ಪುಟಗಳನ್ನು ಹೊಂದಿದೆ. ಈ ಮೊದಲು ಕನ್ನಡದಲ್ಲಿ ಪ್ರಕಟವಾಗಿದ್ದ ’ಅಲ್ಲಮ ಪ್ರಭುದೇವರ ವಚನ-ನಿರ್ವಚನ’ ಕೃತಿಯನ್ನು ಭಾಷಾಂತರಿಸಲಾಗಿದೆ. 2017 ರಲ್ಲಿ ಈ ಕಾರ್ಯವನ್ನು ಆರಂಭಿಸಿ 7 ವರ್ಷಗಳ ನಂತರ ಕೃತಿ ಸಿದ್ಧವಾಗಿದೆ. ಇದಕ್ಕೆ ಸುಬ್ಬರಾವ್, ಪ್ರೊ.ಕೆ.ಬಿ.ಪ್ರಭುಪ್ರಸಾದ, ಪ್ರೊ.ಎನ್.ಜಿ.ಮಹಾದೇವಪ್ಪ, ಶಿವಾನಂದ ಶಹಪುರ ಸಹಕಾರ ನೀಡಿದ್ದಾರೆ.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande