
ಬೀದರ್, 23 ಫೆಬ್ರವರಿ (ಹಿ.ಸ.):
ಆ್ಯಂಕರ್:
ಶಾಸಕರ ಅನುದಾನದಡಿ ಭಾಲ್ಕಿ ವಿಧಾನಸಭಾ ಕ್ಷೇತ್ರದ ಸುಮಾರು 33 ವಿಕಲಚೇತನ ಫಲಾನುಭವಿಗಳಿಗೆ ಸಚಿವ ಈಶ್ವರ ಖಂಡ್ರೆ ದೈನಂದಿನ ಸಂಚಾರ ಹಾಗೂ ಸ್ವಾವಲಂಬನೆಯ ಬದುಕಿನ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಕಲಚೇತನ ಸಹೋದರ-ಸಹೋದರಿಯರಿಗೆ ಸಮಾನ ಅವಕಾಶಗಳು ದೊರಕಬೇಕು, ಅವರ ದಿನನಿತ್ಯದ ಬದುಕು ಇನ್ನಷ್ಟು ಸುಲಭವಾಗಬೇಕು ಎಂಬುದೇ ನಮ್ಮ ಆಶಯ. ಈ ನೆರವು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಸ್ವತಂತ್ರ ಹಾಗೂ ಗೌರವಯುತ ಜೀವನಕ್ಕೆ ಸಹಕಾರಿಯಾಗಲಿ ಎಂದು ಹಾರೈಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa