ಗದಗದಿಂದ ಧರ್ಮಸ್ಥಳಕ್ಕೆ ನೇರ ಬಸ್ ಸಂಚಾರ ವ್ಯವಸ್ಥೆ
ಗದಗ, 23 ಫೆಬ್ರವರಿ (ಹಿ.ಸ.) ಆ್ಯಂಕರ್: ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಗದಗದಿಂದ ಧರ್ಮಸ್ಥಳ ಹಾಗೂ ಮಂಗಳೂರು ನಗರಕ್ಕೆ ನೇರ ಬಸ್ ಸಂಚಾರಕ್ಕೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಲಾಯಿತು. ಗದಗ ಮಾರ್ಗವಾಗಿ ಹೊರಡುವ ಬಸ್ ಲಕ್ಷೇಶ್ವರ, ಹಾವೇರಿ, ರಾಣೇಬೆನ್ನೂರು, ಹರಿಹರ, ಶಿವಮೊಗ್ಗ, ಕಡೂರು, ಉಡ
ಗದಗದಿಂದ ಧರ್ಮಸ್ಥಳಕ್ಕೆ ನೇರ ಬಸ್ ಸಂಚಾರ ವ್ಯವಸ್ಥೆ


ಗದಗ, 23 ಫೆಬ್ರವರಿ (ಹಿ.ಸ.)

ಆ್ಯಂಕರ್:

ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಗದಗದಿಂದ ಧರ್ಮಸ್ಥಳ ಹಾಗೂ ಮಂಗಳೂರು ನಗರಕ್ಕೆ ನೇರ ಬಸ್ ಸಂಚಾರಕ್ಕೆ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಲಾಯಿತು.

ಗದಗ ಮಾರ್ಗವಾಗಿ ಹೊರಡುವ ಬಸ್ ಲಕ್ಷೇಶ್ವರ, ಹಾವೇರಿ, ರಾಣೇಬೆನ್ನೂರು, ಹರಿಹರ, ಶಿವಮೊಗ್ಗ, ಕಡೂರು, ಉಡುಪಿ, ಚಿಕ್ಕಮಗಳೂರು, ಉಜಿರೆ, ಧರ್ಮಸ್ಥಳಕ್ಕೆ ತಲುಪುವ 2 ಬಸ್ ಗಳು ಪ್ರತಿದಿನ ಸಂಜೆ 7 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡುತ್ತದೆ ಬಸ್ ನ ಪ್ರಯಾಣದ ದರ 455 ರೂಪಾಯಿ ಇರುತ್ತದೆ.

ಗದಗ ಮಾರ್ಗವಾಗಿ ಹೊರಡುವ ಬಸ್ ಹುಬ್ಬಳ್ಳಿ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ, ಮಂಗಳೂರುಗೆ ತಲುಪುವ 2 ಬಸ್ ಗಳು ಪ್ರತಿದಿನ ಬೆಳಗ್ಗೆ 8 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡುತ್ತದೆ ಬಸ್ ನ ಪ್ರಯಾಣದ ದರ 472 ರೂಪಾಯಿ ಇರುತ್ತದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ ಅಸೂಟಿ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಜಿ, ಗ್ಯಾರಂಟಿ ಸಮಿತಿ ಸದಸ್ಯರಾದ ಕೆ.ಎಚ್. ಪಾಟೀಲ್, ಶ್ರೀಮತಿ ಮೀನಾಕ್ಷಿ ಬೆನಕಣ್ಣವರ, ಶ್ರೀಮತಿ ಸಾವಿತ್ರಿ ಹೂಗಾರ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಪರಶುರಾಮ್.ವೈ.ಗಡೆದ, ವಿಭಾಗೀಯ ತಾಂತ್ರಿಕ ಶಿಲ್ಪಿ ಚಂದ್ರಶೇಖರ ಇಟಗಿ, ವಿಭಾಗೀಯ ಸಂಚಾರಾಧಿಕಾರಿ ಪಿ.ವಿ.ಮೆತ್ರಿ, ಗದಗ ಡಿಪೋ ಮ್ಯಾನೇಜರ ಬಿ.ಎಲ್.ಗೆನ್ನೂರು, ಬೆಟಗೇರಿ ಡಿಪೋ ಮ್ಯಾನೇಜರ್ ರೋಹಿನಿ ಆರ್.ಬಿ, ನಿಲ್ದಾಣಾಧಿಕಾರಿ ಎಂ.ಬಿ. ತಿಮ್ಮನಗೌಡ್ರು , ಸಾರಿಗೆ ನಿಯಂತ್ರಕರಾದ ಎಸ್.ಎಫ್. ಸಂಗಣ್ಣನವರ, ಎ.ಎಸ್. ಅಂಗಡಿ, ಬಿ.ಎನ್.ಪಾಟೀಲ್, ಎಸ್.ಎನ್. ಕಡೆಮನಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande