
ಬಳ್ಳಾರಿ, 23 ಫೆಬ್ರವರಿ (ಹಿ.ಸ.):
ಆ್ಯಂಕರ್: ಬಳ್ಳಾರಿಯಲ್ಲಿರುವ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಪ್ರಾಂತಿಯ ಬಳ್ಳಾರಿ ಶಾಖೆಯ 2026-27 ರ ಸಾಲಿನ ನೂತನ ಅಧ್ಯಕ್ಷರಾಗಿ ಕೆ. ಪುರುಷೋತ್ತಮರೆಡ್ಡಿ, ಉಪಾಧ್ಯಕ್ಷರಾಗಿ ಕೆ.ವಿ. ಸ್ವಪ್ನ ಪ್ರಿಯ, ಕಾರ್ಯದರ್ಶಿಯಾಗಿ ಶರಣಪ್ಪ ಪಾಟೀಲ್, ಖಜಾಂಚಿಯಾಗಿ ವಿಶ್ವನಾಥ ಆಚಾರಿ, ವಿಧ್ಯಾರ್ಥಿ ವಿಭಾಗದ ಅಧ್ಯಕ್ಷರಾಗಿ ಹನುಮಂತ ರೆಡ್ಡಿ .ಸಿ ಮತ್ತು ಸದಸ್ಯರಾಗಿ ಗಜರಾಜ .ಡಿ ಅವರು ಆಯ್ಕೆಯಾಗಿದ್ದಾರೆ. ಸಹ ಸದಸ್ಯರಾಗಿ ವೆಂಕಟೇಶ ಗುಂಡ ಮತ್ತು ಜಿತೇಂದ್ರ ಸುತಾರ್ ಅವರು ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾದ ಗಜರಾಜ. ಡಿ ಅವರು ನೂತನ ಅಧ್ಯಕ್ಷರಾದ ಕೆ. ಪುರುಷೋತ್ತಮರೆಡ್ಡಿ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಚೆನ್ನೈ) ಕಾರ್ಯದರ್ಶಿ ಪ್ರಮೋದ್ ಆರ್. ಹೆಗ್ಡೆ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಚೆನ್ನೈ) ಮಾಜಿ ಅಧ್ಯಕ್ಷರಾದ ಪನ್ನರಾಜ. ಎಸ್. ಹಾಗೂ ಬಳ್ಳಾರಿ ಶಾಖೆಯ ಮಾಜಿ ಅಧ್ಯಕ್ಷರುಗಳಾದ ಕೆ. ರಾಜಶೇಖರ್, ಸಿದ್ದರಾಮೇಶ್ವರಗೌಡ, ಎರ್ರಿಸ್ವಾಮಿ.ಸಿ, ಹೊನ್ನೂರು ಸ್ವಾಮಿ, ಪ್ರಸನ್ನ ಕುಮಾರ್ ಪಾಟೀಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್