
ಗದಗ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಉಸಿರು ಫೌಂಡೇಶನ್ ಮೂಲಕ ಆಳ್ವಾಸ್ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಶರಣ್ ಪಾಟೀಲ್ ಗದಗದ ಜನರನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಸಂಸ್ಕೃತಿ ಮತ್ತು ಸಂಸ್ಕಾರ ಹುಟ್ಟು ಹಾಕುವ ಪ್ರಯತ್ನ ಮಾಡಿದ್ದಾರೆ. ಆ ಯುವಕನಿಗೆ ನಾವೆಲ್ಲ ಬೆಂಬಲ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಗದಗ ನಗರದ ವಿ.ಡಿ.ಎಸ್.ಟಿ.ಸಿ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ, ಮೂಡುಬಿದರೆ ಇವರ ವತಿಯಿಂದ ಉಸಿರು ಫೌಂಡೇಶನ್ ಗದಗ ಇದರ 10 ನೇಯ ವರ್ಷದ ಸಂಭ್ರಮೋತ್ಸವ ಹಾಗೂ ಆಳ್ವಾಸ್ ವಿರಾಸತ್ ನುಡಿಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗದಗಿನಲ್ಲಿ ಬಹಳ ಉತ್ತಮವಾಗಿರುವ ಉನ್ನತ ಮಟ್ಟದ ಸಾಂಸ್ಕೃತಿಕವಾಗಿರುವ ಸಮಾರಂಭ, ಉಸಿರು ಪೌಂಡೇಶನ್ 10 ನೇ ವರ್ಷದ ಸಮ್ಮೇಳನ ನಡೆಯುತ್ತಿದೆ. ಒಬ್ಬ ಯುವಕ ಬೆಂಗಳೂರಿಗೆ ಹೋಗಿ ತನ್ನ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಇತರರ ಬದುಕು ಕಟ್ಟಿಕೊಡುವ ಛಲದಿಂದ ಹಲವಾರು ವ್ಯಾಪಾರ. ವಹಿವಾಟು ಮಾಡಿ ತನ್ನ ದುಡಿಮೆಯಲ್ಲಿ ಬಂದ ಲಾಭವನ್ನು ನಮ್ಮ ಜನರಿಗೆ ಅನುಕೂಲ ಮಾಡಬೇಕೆಂದು ಬೇರಿಗೆ ನೀರೆರೆಯಬೇಕೆಂಬ ಮಹಾತ್ಮಕಾಂಕ್ಷೆಯಿಂದ ಬಂದಿದ್ದಾರೆ. ಅವರ ಪ್ರಯತ್ನಕ್ಕೆ ಹಾರ್ದಿಕ ಶುಭಾಶಯಗಳು ಎಂದು ಹೇಳಿದರು.
ಜನರನ್ನು ಒಗ್ಗೂಡಿಸಬೇಕು, ಒಳ್ಳೆಯಲ್ಲಿ ರೀತಿಯಿಂದ ಸಕಾರಣದಿಂದ ಸನ್ಮಾರ್ಗದಿಂದ ಒಗ್ಗೂಡಿಸಬೇಕು. ಅದು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಸಾಧ್ಯ ಇದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಕ್ಕಳನ್ನು ಕರೆದುಕೊಂಡು ಬಂದು ಮೋಹನ್ ಆಳ್ವಾ ನೇತೃತ್ವದಲ್ಲಿ ಈ ಕಾರ್ಯಕ್ರಮ ಮಾಡುವ ಮೂಲಕ ಗದಗದ ಜನರನ್ನು ಒಗ್ಗೂಡಿಸುವುದರ ಜೊತೆಗೆ ಹೊಸ ಸಂಸ್ಕೃತಿ ಮತ್ತು ಸಂಸ್ಕಾರ ಹುಟ್ಟು ಹಾಕುವ ಪ್ರಯತ್ನವನ್ನು ಶರಣ ಪಾಟೀಲ್ ಮಾಡಿದ್ದಾನೆ. ಆ ಯುವಕನಿಗೆ ನಾವೆಲ್ಲ ಬೆಂಬಲ ಕೊಡಬೇಕು. ಇವತ್ತಿನ ಕಾರ್ಯಕ್ರಮದಿಂದ ಬಹಳಷ್ಟು ಜನರಿಗೆ ಸ್ಫೂರ್ತಿ ಸಿಕ್ಕು ಅವರೂ ಇದೇ ರೀತಿ ಕೆಲಸ ಮಾಡುವಂತಾಗಲಿ ಎಂದು ಶುಭ ಹಾರೈಸುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ತೋಂಟದಾರ್ಯ ಮಠ, ಗದಗ ಶ್ರೀಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರಮನ್ ಡಾ ಮೋಹನ ಎಂ ಆಳ್ವಾ, ಆಯೋಜಕರಾದ ಶರಣ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP