
ಧಾರವಾಡ, 22 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯಾದಂತ 2026 ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸಂಚಾರ ಸಮೀಕ್ಷೆಯನ್ನು ಎರಡು ದಿನಗಳವರೆಗೆ ನಡೆಸಲಾಗುವುದು.
ಸಂಚಾರ ಸಮೀಕ್ಷೆಯನ್ನು ರಾಜ್ಯ ಹೆದ್ದಾರಿ ಮತ್ತು ಆಯ್ದ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಕೈಗೊಳ್ಳಲಾಗುವುದು.
ಸಂಚಾರ ಸಮೀಕ್ಷೆಯ ಮೂಲ ಉದ್ದೇಶ ರಸ್ತೆಗಳಲ್ಲಿರುವ ಸಂಚಾರ ಸಾಂದ್ರತೆ, ಪ್ರತಿ ದಿನದ ವಾಹನ ಸಂಚಾರ ಮತ್ತು ಸಂಚಾರದ ಏರಳಿತಗಳು, ಇತ್ಯಾದಿ. ಸಂಚಾರ ಸಮೀಕ್ಷೆಯಿಂದ ರಸ್ತೆಗಳ ಅಗಲೀಕರಣ, ಮೇಲ್ದರ್ಜೆಗೇರಿಸುವುದು, ರಸ್ತೆಗಳ ಮೇಲ್ಪದರನ್ನು ಸುಧಾರಿಸುವುದು ಹಾಗೂ ರಸ್ತೆಗಳಲ್ಲಿರುವ ಪಥಗಳನ್ನು ಹೆಚ್ಚಿಸುವ ಕಾರ್ಯಗಳನ್ನು ಕೈಗೊಳ್ಳಲಾಗುವುದು.
ಮುಖ್ಯ ಇಂಜನೀಯರರ ಕಚೇರಿ ಸಂಪರ್ಕ ಮತ್ತು ಕಟ್ಟಡಗಳು (ಉತ್ತರ) ವ್ಯಾಪ್ತಿಯ 7 ಜಿಲ್ಲೆ (9 ವಿಭಾಗಗಳು) ಗಳಾದ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟ ಮತ್ತು ಬಿಜಾಪೂರಗಳಲ್ಲಿ ಸಂಚಾರ ಸಮೀಕ್ಷೆಯನ್ನು 1,484 ಗಣತಿ ಕೇಂದ್ರಗಳಲ್ಲಿ ವಿಡಿಯೋ ಕ್ಯಾಮರಾ ಅಳವಡಿಸುವ ಮೂಲಕ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ.
ರಸ್ತೆ ಸಂಚಾರ ಸಮೀಕ್ಷೆಯನ್ನು ಫೆಬ್ರವರಿ 26, 2026 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 28, 2026 ರಂದು ಬೆಳಿಗ್ಗೆ 6 ಗಂಟೆ ಮುಕ್ತಾಯಗೊಳಿಸಲಾಗುವುದು. ಅಂದರೆ ಸತತವಾಗಿ 48 ಗಂಟೆಗಳ ಕಾಲ ಸಮೀಕ್ಷೆ ನಡೆಸಲಾಗುವುದು.
ಧಾರವಾಡ ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ 53, ಜಿಲ್ಲಾ ಮುಖ್ಯ ರಸ್ತೆ 146 ಒಟ್ಟು 199 ರಸ್ತೆ ಸಂಚಾರ ಗಣತಿ ಕೇಂದ್ರಗಳಿವೆ. ಸಂಚಾರ ಸಮೀಕೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರ ಸಹಕಾರ ಮತ್ತು ಪೋಲೀಸ್ ಇಲಾಖೆ, ಸಾರಿಗೆ ಇಲಾಖೆಯ ಸಹಬಾಗಿತ್ವ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳು (ಉತ್ತರ) ಮುಖ್ಯ ಇಂಜನೀಯರ ಶಿವಾನಂದ ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa