ಪ್ರಯಾಣದ ಮಧ್ಯೆಯೇ ‘ಮನ್ ಕೀ ಬಾತ್’ ಸಂಚಿಕೆ ಆಲಿಸಿದ ಶ್ರೀರಾಮುಲು
ಬೆಂಗಳೂರು, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಬಾನುಲಿ ಕಾರ್ಯಕ್ರಮ ‘ಮನ್ ಕೀ ಬಾತ್’ 131ನೇ ಸಂಚಿಕೆಯನ್ನು ಮಾಜಿ ಸಚಿವ ಇ.ಶ್ರೀರಾಮುಲು ಅವರು ಪ್ರಯಾಣದ ಮಧ್ಯೆಯೇ ತಮ್ಮ ವಾಹನದಲ್ಲಿ ಆಲಿಸಿದರು. ಪ್ರಧಾನಿ ಮೋದಿ ಅವರು ಈ ಸಂಚಿಕೆಯಲ್ಲಿ ದೇಶದ ಅನ್ನದಾತರಾದ ರೈತರ
Ramulu


ಬೆಂಗಳೂರು, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಬಾನುಲಿ ಕಾರ್ಯಕ್ರಮ ‘ಮನ್ ಕೀ ಬಾತ್’ 131ನೇ ಸಂಚಿಕೆಯನ್ನು ಮಾಜಿ ಸಚಿವ ಇ.ಶ್ರೀರಾಮುಲು ಅವರು ಪ್ರಯಾಣದ ಮಧ್ಯೆಯೇ ತಮ್ಮ ವಾಹನದಲ್ಲಿ ಆಲಿಸಿದರು.

ಪ್ರಧಾನಿ ಮೋದಿ ಅವರು ಈ ಸಂಚಿಕೆಯಲ್ಲಿ ದೇಶದ ಅನ್ನದಾತರಾದ ರೈತರ ಕುರಿತು ಪ್ರಸ್ತಾಪಿಸಿದ ಮಾತುಗಳು ಪ್ರತಿಯೊಬ್ಬ ರೈತನಿಗೂ ಪ್ರೇರಣೆಯಾಗುವಂತಿವೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ. ಕೃಷಿ ಕ್ಷೇತ್ರದ ಸಾಧನೆಗಳು ಹಾಗೂ ರೈತರ ಶ್ರಮವನ್ನು ಗುರುತಿಸಿರುವುದು ಗ್ರಾಮೀಣ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಹೋಳಿ ಮತ್ತು ರಂಜಾನ್ ಹಬ್ಬಗಳ ಸಂದರ್ಭದಲ್ಲಿ ದೇಶೀಯ ಉತ್ಪನ್ನಗಳನ್ನು ಬಳಸುವಂತೆ ಪ್ರಧಾನಿ ನೀಡಿದ ಕರೆ ಕೈಮಗ್ಗ ನೇಕಾರರು ಸೇರಿದಂತೆ ಸ್ಥಳೀಯ ಉತ್ಪಾದಕರ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ಅವರು ತಿಳಿಸಿದರು. “ವೋಕಲ್ ಫಾರ್ ಲೋಕಲ್” ಮನೋಭಾವನೆಯಿಂದ ಆತ್ಮನಿರ್ಭರ ಭಾರತ ಗುರಿ ಇನ್ನಷ್ಟು ಬಲವಾಗಲಿದೆ ಎಂದು ಹೇಳಿದರು.

ಇದೇ ವೇಳೆ ಡಿಜಿಟಲ್ ವಂಚನೆ ಪ್ರಕರಣಗಳ ಬಗ್ಗೆ ಉಲ್ಲೇಖಿಸಿರುವುದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ. ಪ್ರತಿಯೊಬ್ಬರೂ ತಂತ್ರಜ್ಞಾನ ಬಳಕೆಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.

ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಸಂಶೋಧನೆ, ಸೆಮಿಕಂಡಕ್ಟರ್ ಕ್ಷೇತ್ರ ಹಾಗೂ ನವೋದ್ಯಮಿಗಳ ಬಗ್ಗೆ ಪ್ರಧಾನಿ ಮಾಡಿರುವ ಪ್ರಸ್ತಾಪನೆ ಯುವಕರಲ್ಲಿ ಹೊಸ ಉತ್ಸಾಹ ಮತ್ತು ಭರವಸೆ ಮೂಡಿಸಿದೆ ಎಂದು ರಾಮುಲು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande