ಬ್ರ್ಯಾಂಡ್ ಕರ್ನಾಟಕ ಕಾರ್ಯಕ್ರಮದಡಿ ಮರುಪಾವತಿ ಪಡೆಯಲು ಅವಕಾಶ
ಶಿವಮೊಗ್ಗ, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಶಿವಮೊಗ್ಗ ಜಿಲ್ಲೆಯ ಸಣ್ಣ ಉದ್ಯಮಿದಾರರು ತಮ್ಮ ಉತ್ಪನ್ನಗಳ ಶ್ರೇಷ್ಠತೆ, ಗುಣಮಟ್ಟ ಇತರೆ ಪ್ರಮಾಣ ಪತ್ರ ಪಡೆಯಲು ಮಾಡಿರುವ ವೆಚ್ಚದ ಮೇಲೆ ರೂ 50,000/- ವರೆಗೆ ಮರುಪಾವತಿ ಪಡೆಯಲು ಹಾಗೂ ತಮ್ಮ ಉತ್ಪನ್ನಗಳ ಪ್ಯಾಕೇಜಿಂಗ್ ವಿನ್ಯಾಸಗೊಳಿಸಲು ಮತ್ತು ಅಭಿವೃದ
ಬ್ರ್ಯಾಂಡ್ ಕರ್ನಾಟಕ ಕಾರ್ಯಕ್ರಮದಡಿ ಮರುಪಾವತಿ ಪಡೆಯಲು ಅವಕಾಶ


ಶಿವಮೊಗ್ಗ, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಶಿವಮೊಗ್ಗ ಜಿಲ್ಲೆಯ ಸಣ್ಣ ಉದ್ಯಮಿದಾರರು ತಮ್ಮ ಉತ್ಪನ್ನಗಳ ಶ್ರೇಷ್ಠತೆ, ಗುಣಮಟ್ಟ ಇತರೆ ಪ್ರಮಾಣ ಪತ್ರ ಪಡೆಯಲು ಮಾಡಿರುವ ವೆಚ್ಚದ ಮೇಲೆ ರೂ 50,000/- ವರೆಗೆ ಮರುಪಾವತಿ ಪಡೆಯಲು ಹಾಗೂ ತಮ್ಮ ಉತ್ಪನ್ನಗಳ ಪ್ಯಾಕೇಜಿಂಗ್ ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿ ಪಡಿಸಲು ಮಾಡಿರುವ ವೆಚ್ಚದ ಮೇಲೆ ರೂ 50,000/- ವರೆಗೆ ಮರುಪಾವತಿ ಪಡೆಯಲು ಆರ್.ಎ.ಎಂ.ಪಿ ಯೋಜನೆಯ ಬ್ರ್ಯಾಂಡ್ ಕರ್ನಾಟಕ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ ಆಸಕ್ತ ಉದ್ಯಮಿಗಳು ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಲು, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ನೆಹರು ರಸ್ತೆ, ಶಿವಮೊಗ್ಗ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹೇಮಂತ್- 9632319691, ದಿಲೀಪ್- 962070433 ಇವರನ್ನು ಸಂಪರ್ಕಿಸುವ0ತೆ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande