ಅಬುಲ್ ಕಲಾಂ ಆಜಾದ್ ಪುಣ್ಯಸ್ಮರಣೆ ; ಮುಖ್ಯಮಂತ್ರಿ ಗೌರವ
ಬೆಂಗಳೂರು, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗಾಂಧಿವಾದಿ ಚಿಂತನೆಗಳಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡು, ಹಲವು ಬಾರಿ ಸೆರೆಮನೆ ವಾಸವನ್ನು ಅನುಭವಿಸಿದರೂ, ಹೋರಾಟದ ಹಾದಿಗೆ ಬೆನ್ನು ತೋರದ ದೇಶಪ್ರೇಮಿ ನಾಯಕ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಎಂದು ಮುಖ್ಯಮಂತ್
Cm


ಬೆಂಗಳೂರು, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗಾಂಧಿವಾದಿ ಚಿಂತನೆಗಳಿಂದ ಪ್ರೇರಣೆ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡು, ಹಲವು ಬಾರಿ ಸೆರೆಮನೆ ವಾಸವನ್ನು ಅನುಭವಿಸಿದರೂ, ಹೋರಾಟದ ಹಾದಿಗೆ ಬೆನ್ನು ತೋರದ ದೇಶಪ್ರೇಮಿ ನಾಯಕ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಆಜಾದ್ ಅವರ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು,

ಬ್ರಿಟಿಷರ ಜನವಿರೋಧಿ ಆಡಳಿತ, ಒಡೆದಾಳುವ ನೀತಿಯನ್ನು ಬಲವಾಗಿ ವಿರೋಧಿಸುತ್ತಿದ್ದ ಕಲಾಂ ಆಜಾದ್ ಅವರು, ತಮ್ಮ ಬರಹಗಳ ಮೂಲಕ ಭಾರತೀಯರಲ್ಲಿ ನಿರಂತರವಾಗಿ ರಾಷ್ಟ್ರಭಕ್ತಿ ಮತ್ತು ಭಾವೈಕ್ಯತೆಯ ಭಾವನೆಯನ್ನು ಹುರಿದುಂಬಿಸಿದರು.

ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಮಂತ್ರಿಗಳಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ, ಸುಧಾರಣೆಯ ಹಾದಿಯಲ್ಲಿ ಶಿಕ್ಷಣ ಕ್ಷೇತ್ರವನ್ನು ಮುನ್ನಡೆಸಿದ ದೂರದೃಷ್ಟಿಯ ಆಡಳಿತಗಾರ ಕಲಾಂ ಆಜಾದ್ ಅವರನ್ನು ಅವರ ಪುಣ್ಯಸ್ಮರಣೆಯ ದಿನ ಗೌರವದಿಂದ ಸ್ಮರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande