
ಹಾವೇರಿ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಗ್ರಾಮ ದೇವತೆಯ ಜಾತ್ರೆ ಬಹಳ ದೊಡ್ಡ ಜಾತ್ರೆ ನಮ್ಮ ಹಿರಿಯರು ಏನೇ ಮಾಡಿದರೂ ಅದಕ್ಕೊಂದು ಅರ್ಥ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿ:ದರು.
ಇಂದು ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದ ಶ್ರೀ ಗ್ರಾಮದೇವಿ ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನಾಶೀರ್ವಾದ ಪಡೆದುಕೊಂಡು, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಜಾತ್ರೆ ಶ್ರದ್ಧಾ ಭಕ್ತಿಯಿಂದ ಎಲ್ಲರೂ ಸೇರಿ ಮಾಡುತ್ತಿದ್ದೀರಿ ಗ್ರಾಮ ದೇವತೆ ಹಾಗೂ ದುರ್ಗಾದೇವಿ ನಿಮಗೆಲ್ಲರಿಗೂ ಆರ್ಶಿವಾದ ಮಾಡಲಿ, ಗ್ರಾಮ ದೇವತೆ ಸ್ಥಾಪನೆ ಮಾಡುವುದರ ಮೂಲಕ ರೋಗ ರುಜಿನಗಳು ಬಾರದಿರಲೆಂದು ಊರಿನ ಮಧ್ಯದಲ್ಲಿ ದೇವಸ್ಥಾನ ನಿರ್ಮಾಣ ಮಾಡುತ್ತಾರೆ. ದೇವಸ್ಥಾನ ಎಷ್ಟೇ ದೊಡ್ಡದಿದ್ದರೂ ಗರ್ಭ ಗುಡಿ ಚಿಕ್ಕದಾಗಿ ಮಾಡಿರುತ್ತಾರೆ. ಅದಕ್ಕೆ ಕಾರಣ ನೀವು ಎಷ್ಟೇ ದೊಡ್ಡವರಿದ್ದರೂ ಯಾವುದೇ ಸ್ಥಾನ ಮಾನ ಇದ್ದರೂ, ಎಷ್ಟೇ ಸಾಹುಕಾರ ಇದ್ದರೂ ದೇವರಿಗೆ ತಲೆ ಬಾಗಿ ನಿನ್ನ ಗೌರವ ಸಮರ್ಪಣೆ ಮಾಡಬೇಕು ಎಂದು ಅದರ ಜೊತೆಗೆ ದೊಡ್ಡ ತೇರು ಮಾಡುತ್ತಾರೆ ಕಾರಣ ಊರಿನ ಎಲ್ಲರೂ ಸೇರಿ ತೇರು ಎಳೆಯಬೇಕು ಎನ್ನುವುದು ಅವರ ಉದ್ದೇಶ, ಹಿರಿಯರು ಏನೇ ಮಾಡಿದರೂ ಅದಕೊಂದು ಅರ್ಥ ಇದೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು. ಈ ಊರಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಭಕ್ತಿ ಭಾವದಿಂದ ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸ ತಂದಿದೆ. ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೇಳಿದ್ದಾರೆ. ಸಾಧ್ಯವಾದಷ್ಟು ಅನುದಾನವನ್ನು ನೀಡುತ್ತೇನೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa