




ಕೊಪ್ಪಳ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಗರಸಭೆ ಸಂಕೀರ್ಣದ ಮುಂದುಗಡೆ ನಡೆದಿರುವ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹ ದ 114 ನೇ ದಿನ ಸಂಪನ್ನಗೊಂಡಿತು. ಫೆ. 24 ರಂದು ಕರೆದಿರುವ ಕೊಪ್ಪಳ ಭಾಗ್ಯನಗರ ಬಂದ್ ಕುರಿತು ಮನವರಿಕೆ ಮಾಡಿಕೊಡಲು ಮತ್ತು ಹೋರಾಟಕ್ಕೆ ಆಹ್ವಾನ ಮಾಡಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಸದಸ್ಯರು ಮುಖಂಡರನ್ನು ಭೇಟಿ ಮಾಡಿ ಆಹ್ವಾನ ನೀಡಿದರು.
ಸರ್ವಪಕ್ಷಗಳ ಮುಖಂಡರನ್ನು ಕೊಪ್ಪಳ ಭಾಗ್ಯನಗರ ಬಂದ್ ಹೋರಾಟದ ಬೆಂಬಲಕ್ಕೆ ಬರಬೇಕೆಂದು ಕರಪತ್ರ ಕೊಟ್ಟು ಆಹ್ವಾನ ಕೊಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರ ಇರಲಿ, ರಾಜ್ಯ ಸರ್ಕಾರ ಇರಲಿ ಎರಡೂ ಸರ್ಕಾರ ಸೇರಿಸಿ ತಾವೆಲ್ಲ ಸೇರಿ ಬಾಧಿತ ಜನರ ಜೀವ ಉಳಿಸಿ ಎಂದು ಜಂಟಿ ಕ್ರಿಯಾ ವೇದಿಕೆ ಮೂಲಕ ಆಗ್ರಹಿಸಿದರು.
ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿ ಆಮಂತ್ರಣ ಕೊಡಲಾಯಿತು. ವಿ.ಪ. ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ಮುಖಂಡರಾದ ಸಿ.ವಿ.ಚಂದ್ರಶೇಖರ, ಬಿಜೆಪಿ ಮುಖಂಡರಾದ ಡಾ.ಬಬಸವರಾಜ ಕ್ಯಾವಟರ ಅವರಿಗೆ ಹೋರಾಟಕ್ಕೆ ಬೆಂಬಲಿಸಿ ಬರುವಂತೆ ಆಹ್ವಾನ ಕೊಡಲಾಯಿತು.
ತಂಡದಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ವಕೀಲರಾದ ರಾಜು ಬಾಕಳೆ, ಜ್ಯೋತಿ ಎಂ. ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಪ್ರಕಾಶಕಿ ಮಾಲಾ ಬಡಿಗೇರ, ಸೌಮ್ಯ ನಾಲ್ವಾಡ, ಸರೋಜಾ ಬಾಕಳೆ, ವಿದ್ಯಾ ನಾಲ್ವಾಡ, ಈಶ್ವರ ಕೊರ್ಲಹಳ್ಳಿ, ನಿವೃತ್ತ ಪ್ರಾಚಾರ್ಯ ಎಸ್.ಬಿ. ರಾಜೂರು, ಪ್ರಕಾಶಕ ಡಿ.ಎಂ.ಬಡಿಗೇರ, ರಂಗ ನಿರ್ದೇಶಕ ಶರಣು ಶೆಟ್ಟರ್, ಕಾಶಪ್ಪ ಚಲುವಾದಿ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ.ಪಾಟೀಲ ಮುಂತಾದ ಪ್ರಮುಖರು ಇದ್ದರು. 114ನೇ ದಿನದ ಧರಣಿಯನ್ನು ಮಹಾದೇವಪ್ಪ ಮಾವಿನಮಾಡು, ಶಿವಪ್ಪ ಜಲ್ಲಿ, ಗಂಗಮ್ಮ ಕೊಡೇಕಲ್, ಗವಿಸಿದ್ದಪ್ಪ ಹಲಿಗಿ, ಸುರೇಶ ಪೂಜಾರ, ಪ್ರಕಾಶ ಹೊಳೆಯಪ್ಪನನರ ಮುಂತಾದವರು ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್