ಹಿಂದೂಗಳು ಅಭಿವೃದ್ದಿಯಾದರೆ ಭಾರತದ ಅಭಿವೃದ್ದಿ : ಬೊಮ್ಮಾಯಿ
ಹುಬ್ಬಳ್ಳಿ, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹಿಂದೂಗಳು ಅಭಿವೃದ್ದಿಯಾದರೆ ಭಾರತದ ಅಭಿವೃದ್ದಿಯಾಗುತ್ತದೆ. ಹಿಂದೂ ಆರ್ಥಿಕತೆ ಬೆಳೆಯಬೇಕೆಂದರೆ ದ್ವಿತೀಯ ಹಾಗೂ ತೃತಿಯ ಹಂತದ ನಗರಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ಆಗ ಭಾರತ ವಿಶ್ವದ ನಂಬರ್ ಒನ್ ದೇಶ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎ
BSB


ಹುಬ್ಬಳ್ಳಿ, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹಿಂದೂಗಳು ಅಭಿವೃದ್ದಿಯಾದರೆ ಭಾರತದ ಅಭಿವೃದ್ದಿಯಾಗುತ್ತದೆ. ಹಿಂದೂ ಆರ್ಥಿಕತೆ ಬೆಳೆಯಬೇಕೆಂದರೆ ದ್ವಿತೀಯ ಹಾಗೂ ತೃತಿಯ ಹಂತದ ನಗರಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು. ಆಗ ಭಾರತ ವಿಶ್ವದ ನಂಬರ್ ಒನ್ ದೇಶ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಇಂದು ಹುಬ್ಬಳ್ಳಿಯ ಡೆನಿಸನ್ಸ್ ಹೊಟೇಲ್ ನಲ್ಲಿ ಹಿಂದೂ ಏಕನಾಮಿಕ್ಸ್ ಫೋರಮ್ ಇವರ ವತಿಯಿಂದ ಏರ್ಪಡಿಸಿದ ನ್ಯಾಷನಲ್ ಚಾಪ್ಟರ್ಸ್ ಮೀಟ್ 2026 ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠ ವಾಗಿರುವ ಜನ್ಮ ಈ ಮನುಷ್ಯನಿಗೆ ಭಗವಂತ ಬುದ್ದಿ ಕೊಟ್ಡಿದ್ದಾನೆ, ಭಾವನೆಗಳನ್ನು ಕೊಟ್ಡಿದ್ದಾನೆ. ಮಾತನಾಡಲು ಕೊಟ್ಟಿದ್ದಾನೆ ಮಿಕ್ಕಿದ್ದೆಲ್ಲವನ್ನು ಮಾಡಲು ಅವನಿಗೆ ಬಿಟ್ಟಿದ್ದಾನೆ. ನಿನ್ನ ಸ್ವಂತ ಜೀವನ ಹೇಗೆ ನಿರ್ಮಾಣ ಮಾಡಿಕೊಳ್ಳಬೇಕು ಅಂತ ಬಿಟ್ಡಿದ್ದಾನೆ. ನಾವು ಭೂಮಿಯ ಮೇಲೆ ಶೇ 1/3 ರಷ್ಟು ಇದ್ದೇವೆ. ನಾವು ವಿಶ್ವ ಮಟ್ಟದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು. ನಾವು ಗಡಿಗಳಿಂದ ವಿಂಗಡಣೆಯಾಗಿದ್ದೆವೆ. ವಿಶ್ವ ಧರ್ಮಾಧಾರದಲ್ಲಿ ವಿಂಗಡಣೆಯಾಗಿದೆ. ಪಾಶ್ಚಿಮಾತ್ಯ ಜಗತ್ತು ಕ್ರಿಶ್ಚಿಯನ್ ಧರ್ಮದಿಂದ ಗುರುತಿಸಿಕೊಂಡಿವೆ. ದೇವರು ಸೃಷ್ಟಿ ಮಾಡಿ ಬಿಟ್ಟಿದ್ದಾನೆ. ಬುದ್ದಿವಂತ ಜನರು ಮಾತ್ರ ಈ ವಿಶ್ವದಲ್ಲಿ ಯಶಸ್ವಿಯಾಗುತ್ತಾರೆ. ನಾವು ಸಿಂಧೂ ನದಿಯ ಪ್ರದೇಶದಲ್ಲಿ ಇರುವುದರೀಂದ ನಾವು ಹಿಂದು ಎಂದು ಕರೆಯಲ್ಪಡುತ್ತೇವೆ. ಸುದೈವದಿಂದ ನಾವು ವಿಶ್ವವನ್ನು ಗೆಲ್ಲಬಹುದು. ನಮ್ಮ ಮೂಲ ಸನಾತನ ಧರ್ಮದಲ್ಲಿ ನಮಗೆ ಧರ್ಮ ಇದೆ. ನಮ್ಮ ಜಿವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ನಾಲ್ಕು ಪುರುಷಾರ್ಥಗಳಿವೆ. ನಮ್ಮ ಇಡಿ ಜೀವನ ಏನು ಮಾಡಬೇಕು, ಏನು ಮಾಡಬಾರದು, ನಾವು ಹೇಗೆ ಬೆಳೆಯಬೇಕು ಎನ್ನುವುದು ಪುರುಷಾರ್ಥ ಎನ್ನುತ್ತೇವೆ. ಮನಷ್ಯ ಆಸ್ತಿ, ಸಂಸ್ಕೃತಿ, ಸಂಸ್ಕಾರ ಸೃಷ್ಟಿಸಬೇಕು. ಅದು ಪುರುಷಾರ್ಥ, ನಮ್ಮ ವೇದಗಳಲ್ಲಿ ಅರ್ಥಶಾಸ್ತ್ರ ಎನ್ನುತ್ತೇವೆ. ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಿದರು. ಕನ್ನಡದಲ್ಲಿ ಇನ್ನೊಂದು ಮಾತಿದೆ ದುಡ್ಡೆ ದೊಡ್ಡಪ್ಪ ಅಂತ ಅಂದರೆ ಹಣವೇ ದೊಡ್ಡದು. ಆದರೆ, ಈಗ ಕಾಲ ಬದಲಾಗಿದೆ. ಈಗ ಬಡವ ಶ್ರೀಮಂತ ಅಂತ ಇಲ್ಲ. ಈಗ ಬಡವನೂ ದೊಡ್ಡ ಶ್ರೀಮಂತ ಆಗಬಹುದು, ಈಗ ದುಡಿಮೆಯೇ ದೊಡ್ಡಪ್ಪ ಆಗಿದೆ. ಲಕ್ಷ್ಮೀ ಚಂಚಲೆ, ಅವಳು ಹಾಗೇ ಇರಬೇಕು. ಕೇವಲ ಒಬ್ಬರ ಬಳಿ ಇದ್ದರೆ ಸಮಸ್ಯೆಯಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಸ್ವಾಮಿ ವಿಜ್ಯಾನಂದ, ವಿಜೇಶ ಸೈಗಲ್, ಶಿವಪ್ರಸಾದ ಟಿ.ಆರ್, ಗೌತಮ್ ಭಾಫಣಾ, ಅರ್ಜುನ ಮಹಾಜನ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande