ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ವೆಬ್ಸೈಟ್ನಲ್ಲಿ ಮಾಹಿತಿ
ಕೊಪ್ಪಳ, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿಯಲ್ಲಿ ಜನವರಿ 9 ರಂದು ಗೃಹಲಕ್ಷ್ಮೀಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ಅನ್ನು ಲಾಂಚ್ ಮಾಡಿದ್ದು, ಮಹಿಳಾ ಉದ್ದಿಮೆದಾರರು ತಮ್ಮ ಉದ್ಯಮದ ಕುರಿತು ಮಾಹಿತಿಯನ್ನು ವೆಬ್ಸೈಟ್ನಲ್ಲಿ ಮಾಹಿತಿಯನ್ನು ಸಲ್ಲಿಸಬಹ
ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ ವೆಬ್ಸೈಟ್ನಲ್ಲಿ ಮಾಹಿತಿ


ಕೊಪ್ಪಳ, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿಯಲ್ಲಿ ಜನವರಿ 9 ರಂದು ಗೃಹಲಕ್ಷ್ಮೀಡಿಜಿಟಲ್ ಮಾರ್ಕೆಟಿಂಗ್ ಆ್ಯಪ್ ಅನ್ನು ಲಾಂಚ್ ಮಾಡಿದ್ದು, ಮಹಿಳಾ ಉದ್ದಿಮೆದಾರರು ತಮ್ಮ ಉದ್ಯಮದ ಕುರಿತು ಮಾಹಿತಿಯನ್ನು ವೆಬ್ಸೈಟ್ನಲ್ಲಿ ಮಾಹಿತಿಯನ್ನು ಸಲ್ಲಿಸಬಹುದು.

ಮಹಿಳಾ ಉದ್ದಿಮೆದಾರರು ಉಚಿತವಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಮತ್ತು ತಾವು ತಯಾರಿ, ವ್ಯಾಪಾರ ಮಾಡುತ್ತಿರುವ ಉದ್ಯಮದ ವಸ್ತುಗಳ ಸುಂದರವಾದ ಫೋಟೋಗಳನ್ನು https://gruhalakshmidigital.org ವೆಬ್ಸೈಟ್ ನಲ್ಲಿ ಹಾಕಿ ತಮ್ಮ ವ್ಯಾಪಾರದ ವಹಿವಾಟನ್ನು ಉನ್ನತ ಮಟ್ಟದಲ್ಲಿ ಹೆಚ್ಚಿಸಿಕೊಳ್ಳಲು ಅನೂಕೂಲವಾಗಲಿದೆ.

ಮಾಹಿತಿಯನ್ನು ಸಲ್ಲಿಸಲು, ಉತ್ಪಾದನೆ, ವ್ಯಾಪಾರ ಮಾಡುತ್ತಿರುವ ವಸ್ತುವಿನ ಹೆಸರು, ಮಹಿಳಾ ಉದ್ಯಮದಾರರ ಇಮೇಲ್ ಐಡಿ, ಮಹಿಳಾ ಉದ್ಯಮದಾರರ ದೂರವಾಣಿ ಸಂಖ್ಯೆ, ಉತ್ಪಾದನೆ, ವ್ಯಾಪಾರ ಮಾಡುತ್ತಿರುವ ವಸ್ತುವಿನ ಸುಂದರವಾದ ಫೋಟೋಗಳ ದಾಖಲೆಗಳೊಂದಿಗೆ ವೆಬ್ಸೈಟ್ ನಲ್ಲಿ ಮಾಹಿತಿಯನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಅಭಿವೃದ್ಧಿ ನಿರೀಕ್ಷಕರು, ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾಡಳಿತ ಭವನ ಇವರನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande