ಕಿತ್ತೂರು ರಾಣಿ ಚೆನ್ನಮ್ಮ ಪುಣ್ಯಸ್ಮರಣೆ ; ಡಿ.ಕೆ.ಶಿವಕುಮಾರ್ ನಮನ
ಬೆಂಗಳೂರು, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಅಪ್ರತಿಮ ಧೈರ್ಯ ಹಾಗೂ ಪರಾಕ್ರಮಗಳಿಂದ ಶತ್ರುಗಳ ನಿದ್ದೆಗೆಡಿಸಿದ್ದ ಕೆಚ್ಚೆದೆಯ ರಾಣಿ, ಕನ್ನಡದ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ
Dks


ಬೆಂಗಳೂರು, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಅಪ್ರತಿಮ ಧೈರ್ಯ ಹಾಗೂ ಪರಾಕ್ರಮಗಳಿಂದ ಶತ್ರುಗಳ ನಿದ್ದೆಗೆಡಿಸಿದ್ದ ಕೆಚ್ಚೆದೆಯ ರಾಣಿ, ಕನ್ನಡದ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮನ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ನಮನ ಸಲ್ಲಿಸಿದ ಅವರು, ನಾರಿ ಶಕ್ತಿಯ ಪ್ರತೀಕವಾಗಿ, ತನ್ನ ದಿಟ್ಟ ನಿರ್ಧಾರ ಹಾಗೂ ತ್ಯಾಗದ ಮೂಲಕ ಇತಿಹಾಸದ ಪುಟಗಳಲ್ಲಿ ಅಮರರಾಗಿರುವ ಚೆನ್ನಮ್ಮನವರ ದೇಶಭಕ್ತಿ ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.

ಅವರ ಸಾಹಸ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯಪ್ರೇಮ ಇಂದಿಗೂ ಯುವ ಪೀಳಿಗೆಗೆ ದಿಕ್ಕು ತೋರಿಸುತ್ತಿದ್ದು, ದೇಶಪ್ರೇಮದ ಜ್ಯೋತಿಯನ್ನು ಉಜ್ವಲವಾಗಿರಿಸಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande