ಚೆನ್ನಮ್ಮನ ಪುಣ್ಯಸ್ಮರಣೆ ; ಮುಖ್ಯಮಂತ್ರಿ ನಮನ
ಬೆಂಗಳೂರು, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ದೌರ್ಜನ್ಯ, ದಬ್ಬಾಳಿಕೆಗಳ ಮೂಲಕ ಭಾರತೀಯರನ್ನು ತಮ್ಮ ಗುಲಾಮರನ್ನಾಗಿಸಿಕೊಂಡು, ಲೂಟಿ ಮಾಡಲು ನಿಂತ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದೇಶವಾಸಿಗಳಲ್ಲಿ ಹೋರಾಟದ ಕಿಚ್ಚು ಹಚ್ಚಿದ ಚೆನ್ನಮ್ಮನ ಶೌರ್ಯ, ಸಾಹಸಗಳು ಹಲವು ತಲೆಮಾರುಗಳ ವರೆಗೆ ರಾಷ್ಟ್ರಭಕ್ತಿಯನ್
Cm


ಬೆಂಗಳೂರು, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ದೌರ್ಜನ್ಯ, ದಬ್ಬಾಳಿಕೆಗಳ ಮೂಲಕ ಭಾರತೀಯರನ್ನು ತಮ್ಮ ಗುಲಾಮರನ್ನಾಗಿಸಿಕೊಂಡು, ಲೂಟಿ ಮಾಡಲು ನಿಂತ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದೇಶವಾಸಿಗಳಲ್ಲಿ ಹೋರಾಟದ ಕಿಚ್ಚು ಹಚ್ಚಿದ ಚೆನ್ನಮ್ಮನ ಶೌರ್ಯ, ಸಾಹಸಗಳು ಹಲವು ತಲೆಮಾರುಗಳ ವರೆಗೆ ರಾಷ್ಟ್ರಭಕ್ತಿಯನ್ನು ಪ್ರೇರೇಪಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚೆನ್ನಮ್ಮನ ಪುಣ್ಯಸ್ಮರಣೆ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು,

ತನ್ನವರ ಸ್ವಾತಂತ್ರ್ಯ, ಘನತೆಯ ಬದುಕಿಗಾಗಿ ಹೋರಾಟದ ಹಾದಿ ಹಿಡಿದು, ಆ ಹಾದಿಯಲ್ಲೇ ಹುತಾತ್ಮರಾದ ಕನ್ನಡ ನೆಲದ ವೀರವನಿತೆ ರಾಣಿ ಚೆನ್ನಮ್ಮನ ಪುಣ್ಯಸ್ಮರಣೆಯಂದು ಅವರ ತ್ಯಾಗ, ಬಲಿದಾನವನ್ನು ಹೆಮ್ಮೆಯಿಂದ ಸ್ಮರಿಸಿ, ನಮಿಸುತ್ತೇನೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande