

ಬಳ್ಳಾರಿ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸಂಗನಕಲ್ಲು ರಸ್ತೆಯ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠ, ಶೃಂಗೇರಿ ಶಾಖೆಯ 8ನೇ ವಾರ್ಷಿಕೋತ್ಸವ ಹಾಗೂ ವಿಮಾನ ಗೋಪುರ ಕಾರ್ಯಾರಂಭ ಇದೇ ಫೆ.26 ರಂದು ಜರುಗಲಿದೆ.
ಈ ಕುರಿತು ಶಾಖಾ ಮಠದ ಆಡಳಿತಾಧಿಕಾರಿಗಳು ಮತ್ತು ಗುರುಸೇವಾ ನಿರತರಾದ ಪಿ.ಎ.ಮುರಳಿ ಅವರು, ಶಾಖಾ ಮಠದಲ್ಲಿ ಅಂದು ಬೆಳಿಗ್ಗೆ 7.30 ರಿಂದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳು ಮತ್ತು ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಕೃಪಾಶೀರ್ವಾದದಿಂದ ವಿಶ್ವವಸು ನಾಮ ಸಂವತ್ಸರ, ಫಾಲ್ಗುಣ ಶುದ್ಧ ದಶಮಿ ಗುರುವಾರ ದಂದು ವಿಜೃಂಭಣೆಯಿಂದ ನಡೆಯಲಿವೆ.
ತನ್ನಿಮಿತ್ತ ವಿಶೇಷ ಅಭಿಷೇಕ, ಬೆಳಿಗ್ಗೆ 8:30 ರಿಂದ ವಿಶೇಷ ಪೂಜೆ, ಬೆಳಿಗ್ಗೆ 9:00 ರಿಂದ ಗೋಪೂಜೆ, 9:15 ರಿಂದ ವಿಮಾನ ಗೋಪುರ ಕಾರ್ಯಾರಂಭ, 10:30 ರಿಂದ ಗುರುಪಾದುಕಾ ಪೂಜೆ, 11:30 ರಿಂದ ವಿಶೇಷ ಭಜನಾ ಕಾರ್ಯಕ್ರಮ ಜರುಗಲಿದೆ.
ಮಧ್ಯಾಹ್ನ 12:30 ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದವಿದ್ದು, ಎಲ್ಲ ಭಕ್ತರು ಕುಟುಂಬ ಸಮೇತವಾಗಿ ಭಾಗವಹಿಸಿ ಉಭಯ ಜಗದ್ಗುರುಗಳವರ ಹಾಗೂ ಶಾರದಾ ಮಾತೆಯ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್