






ಬಳ್ಳಾರಿ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ಎಲ್ಲಾ ಸಮುದಾಯಗಳಿಗೂ ಅವಕಾಶಗಳನ್ನು ನೀಡಿದೆ ಎಂದು ಪಿಎಸ್ಐ ಎ. ಕಾಳಿಂಗ ಅವರು ತಿಳಿಸಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಮೋಕ ಶಾಲೆಯಲ್ಲಿ (ಬಿ.ಡಿ.ಹಳ್ಳಿ) ಶ್ರೀ ಮಹದೇವ ತಾತ ಕಲಾ ಸಂಘ, ಹಂದ್ಯಾಳು ಅವರು ಏರ್ಪಡಿಸಿದ್ದ `ಗೀತ ಗಾಯನ ಮತ್ತು ರಮಾಬಾಯಿ ಅಂಬೇಡ್ಕರ್' ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಸಾಧನೆಯಲ್ಲಿ ರಮಾಬಾಯಿ ಅವರ ಪಾತ್ರ ಮಹತ್ತರವಾದದ್ದು. ಯಾವುದೇ ಮಗುವಿನ ಸಾಧನೆಯ ಹಾದಿಯಲ್ಲಿ ತಾಯಿಯ ಹೆಜ್ಜೆಗಳು - ನಿರ್ಧಾರಗಳು ; ತ್ಯಾಗಗಳು ಸಜೀವವಾಗಿ ಇರುತ್ತವೆ ಎಂದು ಹೇಳಿದರು.
ಲೇಖಕ ಭುವನೇಶ್ ಕುಂಬಾರ ಅವರು ಮುಖ್ಯ ಅತಿಥಿಗಳಾಗಿ, ಇತಿಹಾಸ ಸೃಷ್ಟಿಸಿದ ವ್ಯಕ್ತಿಗಳು, ಸಾಧನೆ ಮಾಡಿರುವವರ ನಾಟಕಗಳ ಪ್ರದರ್ಶನ ಮೂಲಕ ಭವಿಷ್ಯದಲ್ಲೂ ಸಾಧಕರು ಸಿಗಲಿದ್ದಾರೆ ಎಂದರು.
ಶ್ರೀ ಮಹದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು ಅವರು, ಬದುಕಿನ ಪಾಠ ಕಲಿಯಲು ರಂಗಭೂಮಿ ದಾರಿದೀಪ. ಶಾಲಾ ಮಕ್ಕಳಿಗೆ ಮಹಾನ್ ನಾಯಕರ ನಾಟಕಗಳು ಅತ್ಯವಶ್ಯಕ. ಮಕ್ಕಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಸಾಧಕರ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲೆ ಅನುಸೂಯ. ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಸಾಧಕರು ಮತ್ತು ಮಹಾನ್ ವ್ಯಕ್ತಿಗಳ ನಾಟಕಗಳ ಪ್ರದರ್ಶನದಿಂದ ಮಕ್ಕಳಲ್ಲಿ ವೈಚಾರಿಕ ಮನೋಭಾವ ಬೆಳೆಯುತ್ತದೆ ಎಂದರು.
ಅಕ್ಷತಾ ಹಾಗು ಸಂದ್ಯಾ ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು. ಸಂಗಮ ಕಲಾ ತಂಡ ಬಾಗಲಕೋಟೆ ಅವರು ಮಕ್ಕಳಿಗೆ ಹಾಗು ಸಭಿಕರಿಗೆ ಮನ ಮುಟ್ಟುವಂತೆ ಅಭಿನಯಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಂಗ ಕಲಾವಿದ ನೆರವು ಗಣಕರಂಗ ಧಾರವಾಡ , ವಿನ್ಯಾಸ ಮತ್ತು ನಿರ್ದೇಶನ ಶ್ರೀಕಾಂತ ನವಲಗಿರಿ, ಗೌರಿ ಮತ್ತು ಶಿವಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್