
ಕೊಪ್ಪಳ, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾಗ್ಯನಗರದ ಶಂಕರಾಚಾರ್ಯ ಮಠದಲ್ಲಿ ಶಂಕರಾಚಾರ್ಯ ಮಠದ ಪೀಠಾಧಿಪತಿ ಶಿವರಾಮಕೃಷ್ಣಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀಶಂಕರ ಯುವಕ ಮಂಡಳಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಗಂಗಾಧರ ನೇವಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಹನುಮಂತಪ್ಪ ಜೀರಾಳ ಗೌರವಾಧ್ಯಕ್ಷ, ವಿಜಯಕುಮಾರ ಹಣಗಿ ಉಪಾಧ್ಯಕ್ಷ, ಅಶ್ವಥ ರಾಯದುರ್ಗ ಕಾರ್ಯದರ್ಶಿ, ಈರಣ್ಣ ಎನ್.ಪಗಡಲ್ ಸಹ ಕಾರ್ಯದರ್ಶಿ, ಸಂತೋಷ ಪಾಸ್ತೆ ಖಜಾಂಚಿ, ಚಂದ್ರು ಉಂಕಿ, ರಮೇಶ ದೇವದುರ್ಗ, ಮಂಜುನಾಥ, ವಜ್ರೇಶ ಮ್ಯಾಳಿ, ಮೋಹನ ಅರಕಲ್ಲ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಸದಸ್ಯರು ಶುಭ ಕೋರಿದರು.
ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡಬೇಕು. ಸಮಾಜದ ಒಳಿತಿಗಾಗಿ ನಮ್ಮ ಸಮಯವನ್ನು ಮೀಸಲು ಇಡಬೇಕು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಳನ್ನು ಮಾಡಬೇಕು. ಎಲ್ಲರೂ ಒಗ್ಗಟ್ಟಾಗಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಪಟ್ಟಣದ ಅಭಿವೃದ್ಧಿ ವಿಚಾರದಲ್ಲೂ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಮಠದ ಶಿವರಾಮಕೃಷ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಠದ ಟ್ರಸ್ಟ್ ನ ಸದಸ್ಯರಾದ ಗ್ಯಾನೇಶ ಹ್ಯಾಟಿ, ಕೃಷ್ಣ ಪಾನಘಂಟಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್