ಬಳ್ಳಾರಿ : ನಕಲಿ ಪಿಎಚ್‍ಡಿ : ಶಿಸ್ತುಕ್ರಮಕ್ಕೆ ಎಬಿವಿಪಿ ಆಗ್ರಹ
ಬಳ್ಳಾರಿ, 20 ಫೆಬ್ರವರಿ (ಹಿ.ಸ.): ಆ್ಯಂಕರ್: ನಕಲಿ ಪಿಎಚ್‍ಡಿ ಪಡೆದವರ ವಿರುದ್ಧ ಕಠಿಣವಾದ ಶಿಸ್ತುಕ್ರಮ ಕೈಗೊಳ್ಳಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕರಕ್ಕೆ ಮನವಿ ಸಲ್ಲಿಸಿದೆ. ಪ್ರತಿಭಟನೆಯ ನೇತೃತ್ವವ
ಬಳ್ಳಾರಿ : ನಕಲಿ ಪಿಎಚ್‍ಡಿ : ಶಿಸ್ತುಕ್ರಮಕ್ಕೆ ಎಬಿವಿಪಿ ಆಗ್ರಹ


ಬಳ್ಳಾರಿ : ನಕಲಿ ಪಿಎಚ್‍ಡಿ : ಶಿಸ್ತುಕ್ರಮಕ್ಕೆ ಎಬಿವಿಪಿ ಆಗ್ರಹ


ಬಳ್ಳಾರಿ, 20 ಫೆಬ್ರವರಿ (ಹಿ.ಸ.):

ಆ್ಯಂಕರ್: ನಕಲಿ ಪಿಎಚ್‍ಡಿ ಪಡೆದವರ ವಿರುದ್ಧ ಕಠಿಣವಾದ ಶಿಸ್ತುಕ್ರಮ ಕೈಗೊಳ್ಳಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕರಕ್ಕೆ ಮನವಿ ಸಲ್ಲಿಸಿದೆ.

ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಜಿಲ್ಲಾ ಸಂಚಾಲಕರಾದ ಕೆ. ದಿಲೀಪ್ ಕುಮಾರ್ ಅವರು, ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ನಕಲಿ ಪಿಎಚ್‍ಡಿ ಪದವಿಗಳನ್ನು ಹೊಂದಿರುವವರು ಅತಿಥಿ ಉಪನ್ಯಾಸಕರಾಗಿ ಹಾಗೂ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಕಲಿ ಪಿಎಚ್‍ಡಿ ಪಡೆದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅನೇಕರು ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಕಾರಣ ಸರ್ಕಾರ ನಕಲಿ ಪಿಎಚ್‍ಡಿ ಪದವೀಧರರನ್ನು ತ್ವರಿತವಾಗಿ ಪತ್ತೆ ಮಾಡಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ನಕಲಿ ಪಿಎಚ್‍ಡಿ ಪದವಿಗಳನ್ನು ಸಲ್ಲಿಸಿ, ನೇಮಕಾತಿ ಆಗಿ ರಾಜೀನಾಮೆ ನೀಡುವುದರಿಂದ ಖಾಲಿ ಬೀಳುವ ಹುದ್ದೆಗಳನ್ನು ಸರ್ಕಾರ ತ್ವರಿತವಾಗಿ ಭರ್ತಿ ಮಾಡಬೇಕು. ಇಲ್ಲವಾದಲ್ಲಿ ಪೂರ್ಣಕಾಲಿಕ ಹುದ್ದೆಗಳಿಗೆ ಉಪನ್ಯಾಸಕ ನೇಮಕಾತಿಗೆ ಅರ್ಜಿ ಆಹ್ವಾನಿಸಬೇಕು ಎಂದು ಅವರು ಕೋರಿದ್ದಾರೆ.

ತಳವಾರ ಭರತ್, ದರ್ಶನ್, ಲೋಹಿತ್, ಮಾರುತಿ, ಕಾವ್ಯ, ಪೂರ್ಣಿಮ, ಆರ್.ಎನ್. ರಿಂದು, ಕೀರ್ತಿ, ಅರ್ಚನ ಹಾಗೂ ಕಾರ್ಯಕರ್ತರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande