ಮಕ್ಕಳು ಬರೆದಿರುವ ಪ್ರಕಟಿತ ಸಾಹಿತ್ಯ ಕೃತಿಗಳ ಸ್ಪರ್ಧೆ
ಬೆಂಗಳೂರು, 20 ಫೆಬ್ರವರಿ (ಹಿ.ಸ.) : ಆ್ಯಂಕರ್ : ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನವು ದಿನಾಂಕ 7, 8, 9, 10 - ಮೇ - 2026 ರಂದು ಕೊಪ್ಪಳದಲ್ಲಿ 4 ದಿನ ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಂಗಮ0ದಿರದಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗ
ಮಕ್ಕಳು ಬರೆದಿರುವ ಪ್ರಕಟಿತ ಸಾಹಿತ್ಯ ಕೃತಿಗಳ ಸ್ಪರ್ಧೆ


ಬೆಂಗಳೂರು, 20 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 12ನೇ ಸಮ್ಮೇಳನವು ದಿನಾಂಕ 7, 8, 9, 10 - ಮೇ - 2026 ರಂದು ಕೊಪ್ಪಳದಲ್ಲಿ 4 ದಿನ ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಂಗಮ0ದಿರದಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

15 ವರ್ಷದೊಳಗಿನ ಮಕ್ಕಳಿಗಾಗಿ ಸಾಹಿತ್ಯ ಸ್ಪಧೆ ನಡೆಯಲಿದೆ. 2015 ರಿಂದ 2025 ರವರೆಗೆ, 15 ವರ್ಷದ ಮಕ್ಕಳ ಬರೆದ, ಯಾವುದೇ ಪ್ರಾಕಾರದ ಪ್ರಕಟವಾದ ಸಾಹಿತ್ಯ ಕೃತಿಗಳಿಗೆ ಈ ಸ್ಪರ್ಧೆಗೆ ಅರ್ಹ.

ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಈ ಸ್ಪರ್ಧೆ ನಡೆಯಲಿದ್ದು, ತಮ್ಮ ಕೃತಿಗಳ 3 ಪ್ರತಿಯೊಂದಿಗೆ, ವಯಸ್ಸಿನ ದಾಖಲೆ ಸಮೇತ ಸಂಪೂರ್ಣ ಬಯೋಡಾಟಾ, ಭಾವಚಿತ್ರದೊಂದಿಗೆ ದಿನಾಂಕ 15-04-2026 ರೊಳಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು.

ಸಂಸ್ಥೆಯ ವಿಳಾಸ : ಅಧ್ಯಕ್ಷರು, ಮಕ್ಕಳ ಸಾಹಿತ್ಯ ಕೃತಿ ಸ್ಪರ್ಧೆ ವಿಭಾಗ, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿ0ಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸೆ್ತ, ಮಂಜುನಾಥನಗರ, ಬೆಂಗಳೂರು-560010. ಮೊ : 9845307327.

ಆಯ್ಕೆಯಾದ ಎಲ್ಲ ಕೃತಿಗಳಿಗೆ, ತಲಾ 2000 ರೂ. ನಗದು ಬಹುಮಾನದೊಂದಿಗೆ, ರಾಜ್ಯಮಟ್ಟದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಯ ಗೌರವವಿರುತ್ತದೆ.

ವಿ.ಸೂ. : ಈ ಹಿಂದೆ ನಡೆದ 2005ರ ಸ್ಪಧೆಯಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದವರು ಕಳುಹಿಸುವಂತಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆಯವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande