ಅಗ್ನಿಪಥ್ ನೇಮಕಾತಿ: ಆಸಕ್ತರಿಂದ ನೋಂದಣಿಗೆ ಸೂಚನೆ
ಕೊಪ್ಪಳ, 20 ಫೆಬ್ರವರಿ (ಹಿ.ಸ.): ಆ್ಯಂಕರ್ : ಬೆಂಗಳೂರಿನ ಕೇಂದ್ರ ಕಚೇರಿ ನೇಮಕಾತಿ ವಲಯದ ಅಡಿಯಲ್ಲಿ ಬರುವ ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಂದ ಅಗ್ನಿಪಥ್ ನೇಮಕಾತಿಗಾಗಿ ಆಸಕ್ತ ಪುರುಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ. ರಾಜ್ಯದ ಬ
ಅಗ್ನಿಪಥ್ ನೇಮಕಾತಿ: ಆಸಕ್ತರಿಂದ ನೋಂದಣಿಗೆ ಸೂಚನೆ


ಕೊಪ್ಪಳ, 20 ಫೆಬ್ರವರಿ (ಹಿ.ಸ.):

ಆ್ಯಂಕರ್ : ಬೆಂಗಳೂರಿನ ಕೇಂದ್ರ ಕಚೇರಿ ನೇಮಕಾತಿ ವಲಯದ ಅಡಿಯಲ್ಲಿ ಬರುವ ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಂದ ಅಗ್ನಿಪಥ್ ನೇಮಕಾತಿಗಾಗಿ ಆಸಕ್ತ ಪುರುಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದೆ.

ರಾಜ್ಯದ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಪುರುಷ ಅಭ್ಯರ್ಥಿಗಳು ಸ್ವಯಂ ಪ್ರೇರಿತರಾಗಿ ಅಗ್ನಿಪಥ್ ನೇಮಕಾತಿಗಾಗಿ ಭಾರತೀಯ ಸೇನಾ ವೆಬ್‍ಸೈಟ್ www.joinindianarmy.nic.in ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿ ಮಾಡಿಕೊಳ್ಳಲು ಏಪ್ರಿಲ್ 1 ಕೊನೆಯ ದಿನವಾಗಿದೆ. ಅಗ್ನಿವೀರ ಜೆನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಟ್ರೇಡ್ಸ್‍ಮನ್(10ನೇ ತರಗತಿ ಉತ್ತೀರ್ಣ), ಅಗ್ನಿವೀರ ಟ್ರೇಡ್ಸ್‍ಮನ್(8ನೇ ತರಗತಿ ಉತ್ತೀರ್ಣ), ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳ ನೇಮಕಾತಿಗೆ ಹದಿನೇಳುವರೆ ವರ್ಷದಿಂದ 22 ವರ್ಷದೊಳಗಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.

ವಿದ್ಯಾರ್ಹತೆ ಮತ್ತು ಇತರೆ ಮಾನದಂಡಗಳ ವಿವರಗಳನ್ನು ಬೆಳಗಾವಿ ಸೇನಾ ನೇಮಕಾತಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಬೆಳಗಾವಿ ಸೇನಾ ನೇಮಕಾತಿ ಕಚೇರಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande