
ಗದಗ, 20 ಫೆಬ್ರವರಿ (ಹಿ.ಸ.)
ಆ್ಯಂಕರ್:
ನಾಳೆ ಮುಂಜಾನೆ : 10-30 ಗಂಟೆಗೆ ತ್ರಿವಿಧ ದಾಸೋಹಿ, ಕನ್ನಡದ ಕುಲಗುರುಗಳು, ಬಸವತತ್ವದ ದಂಡನಾಯಕರು, ಭಾರತ ಸರ್ಕಾರದಿಂದ ರಾಷ್ಟ್ರೀಯ ಭಾವೈಕ್ಯತೆ ಹಾಗೂ ದೇಶದ ಏಕತಾ ಪ್ರಶಸ್ತಿ ಪುರಸ್ಕೃತರಾದ ಪೂಜ್ಯಶ್ರೀ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ 77ನೇ ಜಯಂತಿ ಮತ್ತು ಭಾವೈಕ್ಯತೆ ದಿನಾಚರಣೆಯನ್ನು ಆಚರಿಸಲಾಗುವುದು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಮ್ಮುಖವನ್ನು ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಬೈಲೂರು ಮುಂಡರಗಿ, ಶಾಂತಲಿಂಗ ಮಹಾಸ್ವಾಮಿಗಳು ಭೈರನಹಟ್ಟಿ-ಶಿರೋಳ, ಕೋರಣೇಶ್ವರ ಮಹಾಸ್ವಾಮಿಗಳು ಆಳಂದ, ಪ್ರಭುಮಹಾಸ್ವಾಮಿಗಳು ಸಂಡೂರು, ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಅರಸೀಕೆರೆ ಸಮ್ಮುಖ ವಹಿಸಲಿದ್ದಾರೆ.
ಬೆಳಿಗ್ಗೆ 8-30 ಗಂಟೆಗೆ ಭೀಷ್ಮಕೆರೆಯ ಮಹಾತ್ಮ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದವರೆಗೆ ಭಾವೈಕ್ಯತೆಯಾತ್ರೆ ನಡೆಯಲಿದೆ. ಭಾವೈಕ್ಯತೆ ಯಾತ್ರೆಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಎಚ್.ಕೆ. ಪಾಟೀಲ ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರು ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಬಸವರಾಜ ಬೊಮ್ಮಾಯಿ ಲೋಕಸಭಾ ಸದಸ್ಯರು ಹಾವೇರಿ-ಗದಗ ಹಾಗೂ ಮಾಜಿ ಮುಖ್ಯಮಂತ್ರಿಗಳು, ಜಿ.ಎಸ್. ಪಾಟೀಲ ಶಾಸಕರು ರೋಣ, ಸಿ.ಸಿ.ಪಾಟೀಲ ಶಾಸಕರು ನರಗುಂದ, ಡಾ. ಚಂದ್ರು ಲಮಾಣಿ ಶಾಸಕರು ಶಿರಹಟ್ಟಿ, ಎಸ್.ವಿ. ಸಂಕನೂರ ವಿಧಾನ ಪರಿಷತ್ ಸದಸ್ಯರು ಗದಗ, ಎಸ್.ಎಸ್.ಪಾಟೀಲ ಮಾಜಿ ಸಚಿವರು ಗದಗ, ರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕರು ಶಿರಹಟ್ಟಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಧಾರವಾಡದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಸಂಮಾನ ಜರುಗಲಿದೆ. ಕಾರ್ಯಕ್ರಮದಲ್ಲಿ ಡಾ. ವಿದ್ಯಾವತಿ ಅಕ್ಕಿ ರಚಿಸಿದ ತೋಂಟದಾರ್ಯ ಸಂಸ್ಥಾನಮಠ ಸಾಹಿತ್ಯ ಪ್ರಕಟನೆಗಳು : ತಾತ್ವಿಕ ಸ್ವರೂಪ, ಡಾ. ಸರೋಜಿನಿ ಆಯ್ ಪಾವಟೆ ರಚಿಸಿದ ಚಲವಾದಿ ಗೌರಮ್ಮನ ಕಥೆಗಳು, ಪ್ರೊ. ಶಶಿಧರ ತೋಡಕರ ಸಂಪಾದಿಸಿದ ಮಾಯದಂಥಾ ಬೆಳದಿಂಗಳ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಇದೇ ಸಂದರ್ಭದಲ್ಲಿ ನೂತನ ವಚನ ಪಾಠಶಾಲೆ ಉದ್ಘಾಟನೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಸರ್ವಜನಾಂಗದ ಸದ್ಭಕ್ತರು, ಪೂಜ್ಯರ ಅಭಿಮಾನಿಗಳು, ಬಸವಪರ ಸಂಘಟನೆಗಳ ಸರ್ವಸದಸ್ಯರು ಎಲ್ಲರೂ ಭಾಗವಹಿಸಬೇಕೆಂದು ಶ್ರೀಮಠದ ಆಡಳಿತಾಧಿಕಾರಿಗಳು ಎಸ್.ಎಸ್. ಪಟ್ಟಣಶೆಟ್ಟರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡರ, ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP