ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ; ವಿಜಯೇಂದ್ರ ಶುಭಾಶಯ
ಬೆಂಗಳೂರು, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹಿಂದೂ ಸ್ವರಾಜ್ಯದ ಸಂಸ್ಥಾಪಕರೂ, ಭಾರತೀಯ ನೌಕಾಪಡೆಯ ಪಿತಾಮಹರೂ ಆದ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಭಾಶಯ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ
Shivaji


ಬೆಂಗಳೂರು, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹಿಂದೂ ಸ್ವರಾಜ್ಯದ ಸಂಸ್ಥಾಪಕರೂ, ಭಾರತೀಯ ನೌಕಾಪಡೆಯ ಪಿತಾಮಹರೂ ಆದ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಭಾಶಯ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಧೈರ್ಯ, ಶೌರ್ಯ, ಸ್ವಾಭಿಮಾನ ಮತ್ತು ಸುಶಾಸನದ ಮೂಲಕ ಸನಾತನ ಧರ್ಮ ಹಾಗೂ ಮಾತೃಭೂಮಿಯ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಮಹತ್ತರ ಸಾಮ್ರಾಜ್ಯವನ್ನು ನಿರ್ಮಿಸಿದರು ಎಂದು ಸ್ಮರಿಸಿದ್ದಾರೆ. ಅವರ ದೇಶಭಕ್ತಿ, ಧರ್ಮನಿಷ್ಠೆ, ಧೈರ್ಯ ಮತ್ತು ಸಾಹಸಗಳಿಂದ ಕೂಡಿದ ಜೀವನಗಾಥೆ ಇಂದಿನ ಪೀಳಿಗೆಗೆ ಶಾಶ್ವತ ಪ್ರೇರಣೆ ಎಂದು ತಿಳಿಸಿದ್ದಾರೆ.

ಶಿವಾಜಿ ಮಹಾರಾಜರ ಆದರ್ಶಗಳ ಬೆಳಕಿನಲ್ಲಿ ಸಶಕ್ತ ಹಾಗೂ ಸ್ವರಾಜ್ಯ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವ ಸಂಕಲ್ಪವನ್ನು ಪುನರುಚ್ಚರಿಸೋಣ ಎಂದು ವಿಜಯೇಂದ್ರ ಕರೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande