
ತೋರಣಗಲ್ಲು, 19 ಫೆಬ್ರವರಿ (ಹಿ.ಸ.)
ಆ್ಯಂಕರ್ : ತೋರಣಗಲ್ಲು 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜೆಸ್ಕಾಂ ವತಿಯಿಂದ ವಿದ್ಯುತ ಮಾರ್ಗಗಳ ಬದಲಾವಣೆ ಮತ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬಳ್ಳಾರಿ ಘಟಕದವರು ಮಾರ್ಗಮುಕ್ತತೆ ಕೋರಿರುವ ಕಾರಣ ಫೆಬ್ರವರಿ 20 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ತೋರಣಗಲ್ಲು ರೈಲ್ವೆ ನಿಲ್ದಾಣ ವ್ಯಾಪ್ತಿಗೆ ಒಳಪಡುವ ಪಂಚಾಯತಿಗಳಾದ ವಡ್ಡು, ತಾಳೂರು, ಬನ್ನಿಗಟ್ಟಿ, ತಾರನಗರ, ಕುರೆಕುಪ್ಪಾ ಟೌನ್ ಗ್ರಾಮಗಳ ಎನ್‌ಜೆವೈ ಮತ್ತು ಐಪಿಸೆಟ್ ಗ್ರಾಹಕರಿಗೆ, ವಾಟರ್‌ವರ್ಕ್ಸ್ ಎನ್‌ಇಒ ಇಂಡಸ್ಟ್ರೀಗಳಿಗೆ ಹಾಗೂ ಟಿಎಫ್2 ವಾಟರ್ ವರ್ಕ್ಸ್ ಫಿಡರ್‌ನ ಮಾರ್ಗಕ್ಕೆ ಬರುವ ಎಲ್ಲಾ ಎಚ್‌ಟಿ ಮತ್ತು ಇಎಚ್‌ಟಿ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್