ವೇಮಗಲ್ ಪಟ್ಟಣ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ
ವೇಮಗಲ್ ಪಟ್ಟಣ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಚಾಲನೆ,
ಕೋಲಾರ ತಾಲ್ಲೂಕಿನ ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಾಸಕ ಕೊತ್ತೂರು ಮಂಜುನಾತ್ ಗುದ್ದಲಿ ಪೂಜೆ ನೆರವೇರಿಸಿದರು.


ಕೋಲಾರ, ೧೯ ಫೆಬ್ರವರಿ (ಹಿ.ಸ) :

ಆ್ಯಂಕರ್ : ಕೋಲಾರ ತಾಲೂಕಿನ ವೇಮಗಲ್-ಕುರಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಗುರುವಾರ ಶಾಸಕ ಕೊತ್ತೂರು ಮಂಜುನಾಥ್ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ಸಿಸಿ ರಸ್ತೆ, ಪುಡ್ ಕೋಟ್ ಮಳಿಗೆಗಳು, ಪ್ಲಾಸ್ಟಿಕ್ ಮುಕ್ತವಾಗಿಡಲು ಕೈಚೀಲ, ಅಧ್ಯಕ್ಷರಿಗೆ ನೂತನ ವಾಹನ, ಹಾಗೂ ಕಸ ಸಂಗ್ರಹ ಬಕೆಟ್ ಗಳನ್ನು ವಿತರಿಸಿದರು.

ನಂತರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಗ್ರಾಮಾಂತರ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ ಇಲ್ಲಿ ಅಗಬೇಕಿದ್ದ ರಸ್ತೆ ಅಭಿವೃದ್ಧಿ ಇತರೆ ಕಾಮಗಾರಿಯ ಬಗ್ಗೆ ಸ್ಥಳೀಯ ಆಡಳಿತ ಸಂಸ್ಥೆಯು ಗಮನಕ್ಕೆ ತಂದ ನಂತರ ಅಗತ್ಯ ಅನುದಾನವನ್ನು ಹೊಂದಿಕೊAಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್ ವೆಂಕಟೇಶ್, ಮುಖ್ಯ ಅಧಿಕಾರಿ ಎಸ್.ಎಂ ವೆಂಕಟೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ಅಂಜಲಿ ಪ್ರಕಾಶ್, ರಾಮು, ರವಿಚಂದ್ರ, ಲೋಕೇಶ್ ಮರಿಯಪ್ಪ, ಜಿ.ಮಂಜುಳಾಮುನಿರಾಜು, ಕೆ.ವಿ.ಸುಬ್ರಮಣ್ಯ, ಕೆ.ಎನ್.ರಮೇಶ್, ತಾಸುಪ್ ಖಾನ್, ಗಂಗಪ್ಪ, ಮುನಿರಾಜು, ಎಂ. ಶಿಲ್ಪಶಂಕರ್, ವಿ.ಎಂ.ನಾಗೇಶ್, ದೀಪಾವೆಂಕಟೇಶ್, ಶಶಿಕಲಾ ನಾಗೇಶ್, ನಾಮಿನಿ ಸದಸ್ಯರಾದ ವಿಎನ್ ನಟರಾಜ್ ತಿರುಮಳಪ್ಪ, ಸನಾವುಲ್ಲಾ ಖಾನ್, ಆಶ್ರಯ ಸಮಿತಿ ಸದಸ್ಯರಾದ ಪೆರ್ಜೇನಹಳ್ಳಿ ನಾಗೇಶ್, ಬೆಟ್ಟಹೊಸಪುರ ಜಗದೀಶ್ , ಅಮ್ರಿನ್ ಬಾನು ಬಾನು ಗುತ್ತಿಗೆದಾರ ಶ್ರೀಧರ್ ಭಾಗಿಯಾಗಿದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಾಸಕ ಕೊತ್ತೂರು ಮಂಜುನಾತ್ ಗುದ್ದಲಿ ಪೂಜೆ ನೆರವೇರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande