ಮಾ.೧ ರಂದು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಸಮಾವೇಶ
ಮಾ.೧ ರಂದು ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಸಮಾವೇಶ
ಕೋಲಾರದ ಡಿಡಿಪಿಐ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್ ಚೌಡಪ್ಪ ಜಿಲ್ಲಾ ಸಂಘಕ್ಕೆ ರಾಜ್ಯ ಸಮಾವೇಶಕ್ಕೆ ಆಹ್ವಾನ ನೀಡಿದರು.


ಕೋಲಾರ, ೧೯ ಫೆಬ್ರವರಿ (ಹಿ.ಸ) :

ಆ್ಯಂಕರ್ : ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಚನೆ, ಸಂಘಟನೆ ಮತ್ತು ಕಾರ್ಯವೈಖರಿಯ ಸಂಕ್ಷಿಪ್ತ ಪರಿಚಯವನ್ನು ರಾಜ್ಯಮಟ್ಟದ ಸಮಾವೇಶದಲ್ಲಿ ಸಭಾಪತಿಗಳು ಸಭಾಧ್ಯಕ್ಷರ ಹಾಗೂ ಮಂತ್ರಿ ಶಾಸಕರ ಸಮ್ಮುಖದಲ್ಲಿ ಅನಾವರಣಗೊಳಿಸುವ ಕಾರ್ಯ ಭರದಿಂದ ಸಾಗಿದೆ ಎಂದು ರಾಜ್ಯಾಧ್ಯಕ್ಷ ಎಸ್ ಚೌಡಪ್ಪ ಮಾಹಿತಿ ನೀಡಿದರು.

ನಗರದ ಡಿಡಿಪಿಐ ಕಚೇರಿ ಮುಂಭಾಗ ಸಮಾವೇಶಕ್ಕೆ ಸಂಬ0ಧಿಸಿದ0ತೆ ಆಹ್ವಾನ ಪತ್ರ ಹಸ್ತಂತರಿಸಿ ಅವರು ಮಾತನಾಡಿ, ಮಾ.೧ರ ಭಾನುವಾರ ಬೆಳಗ್ಗೆ ೯-೩೦ಕ್ಕೆ ಬೆಂಗಳೂರಿನ ಶಿಕ್ಷಕರ ಸದನದಲ್ಲಿ ರಾಜ್ಯಮಟ್ಟದ ಪ್ರಥಮ ಸಮಾವೇಶ ಹಮ್ಮಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಅವಿರತವಾಗಿ ಸೇವೆ ಸಲ್ಲಿಸಿ ಶಿಕ್ಷಕರ, ಉಪನ್ಯಾಸಕರ, ಮತ್ತು ಇಲಾಖೆಯ ನೌಕರರ ಅನೇಕ ಸಮಸ್ಯೆಗಳನ್ನು ಬಗ್ಗೆಹರಿಸುವ ಜೊತೆಗೆ ಪ್ರತಿ ಹಂತದಲ್ಲೂ ನಿರಂತರವಾಗಿ ನಮ್ಮೊಂದಿಗೆ ಇರುವ ಗಣ್ಯರಿಗೆ ಗೌರವಾರ್ಪಣೆ ಮಾಡುವುದಾಗಿ ತಿಳಿಸಿದರು.

ಸಂಘದ ನಿರ್ಧಾರದಂತೆ ಶಿಕ್ಷಣ ಇಲಾಖೆಯ ಬೋಧಕೇತರ ಶ್ರೇಷ್ಠ ಸಿಬ್ಬಂದಿಗೆ ಸೇವಾ ಭೂಷಣ ಪ್ರಶಸ್ತಿ, ರಾಜ್ಯಮಟ್ಟದಲ್ಲಿ ಸಂಘವನ್ನು ಸಮರ್ಥವಾಗಿ ಸಂಘಟಿಸಿದ ನಮ್ಮ ಸಂಘದ ಸೇನಾನಿಗಳಿಗೆ ಸಂಘಟನಾ ಸ್ಪೂರ್ತಿ ಪ್ರಶಸ್ತಿಯನ್ನು ಮತ್ತು ಇಲಾಖೆಯಲ್ಲಿ ಎಲೆಮರೆ ಕಾಯಿಯಂತೆ ಪ್ರಶಸ್ತಿಯ ಗೊಡವೆ ಇಲ್ಲದೆ ಕೆಲಸ ಮಾಡುತ್ತಿರುವ ಅತ್ಯುತ್ತಮರಲ್ಲಿ ಪ್ರಾಥಮಿಕ ದಿಂದ ಪದವಿಪೂರ್ವ ಕಾಲೇಜು ಉಪನ್ಯಾಸಕರ ತನಕ ಜಿಲ್ಲೆಗೆ ಒಬ್ಬರಂತೆ ೩೫ ಶಿಕ್ಷಕರಿಗೆ ವಿದ್ಯಾರತ್ನ ಪ್ರಶಸ್ತಿಯನ್ನು ನೀಡಲಾಗುವುದು.

ಈ ಸಮಾವೇಶದಲ್ಲಿ ರಾಜ್ಯದ ಸಭಾಪತಿಗಳು ಸಭಾಧ್ಯಕ್ಷರು ಮಂತ್ರಿಗಳು ವಿಧಾನ ಪರಿಷತ್ ಸದಸ್ಯರು ಹಾಗೂ ನಿಕಟ ಪೂರ್ವ ಸದಸ್ಯರು ರಾಜ್ಯ ನೌಕರರ ಸಂಘದ ಅಧ್ಯಕ್ಷರು ರಾಜ್ಯದ ವಿವಿಧ ವೃಂದದ ಶಿಕ್ಷಕರ ಸಂಘದ ಅಧ್ಯಕ್ಷರುಗಳು ಬೋಧಕೇತರ ಸಂಘದ ಅಧ್ಯಕ್ಷರುಗಳು ಹಾಗೂ ಹಿತೈಷಿಗಳು ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸುಮಾರು ೨೦೦೦ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಹಾಗೂ ಸ್ನೇಹಿತರು ಭಾಗವಹಿಸುವ ನಿರೀಕ್ಷೆಯಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಈ ಸಂಬ0ಧ ೧೭ ಸಮಿತಿ ಮತ್ತು ಉಪ ಸಮಿತಿಗಳನ್ನು ರಚಿಸಲಾಗಿದೆ ಎಲ್ಲಾ ಕೆಲಸಗಳು ಪ್ರಗತಿಯಲ್ಲಿದ್ದು, ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳು ಜಿಲ್ಲೆ ಮತ್ತು ತಾಲೂಕಿನ ಪರಿಣಿತಿ ನೌಕರ ಹಾಗೂ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಕೋಲಾರ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುಳ ಮಾತನಾಡಿ, ರಾಜ್ಯಾಧ್ಯಕ್ಷರು ನಮ್ಮ ಜಿಲ್ಲೆಯವರಾಗಿದ್ದು ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮಾವೇಶಕ್ಕೆ ನಮ್ಮ ಜಿಲ್ಲೆಯಿಂದ ಸುಮಾರು ೨೦೦ ಜನಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಕರೆದುಕೊಂಡು ಹೋಗುವುದರ ಜೊತೆಗೆ ಪ್ರತಿ ತಾಲೂಕಿನಿಂದ ಕೊಡಬೇಕಾದ ಹತ್ತು ಸಾವಿರ ರೂಗಳನ್ನು ನೀಡಿ ಎಲ್ಲಾ ಕಾಗದ ಪತ್ರಗಳನ್ನು ನಿಯಮಾನುಸಾರ ನೀಡಿ ಸಂಘವನ್ನು ಬಲಿಷ್ಠ ಗೊಳಿಸುವುದರ ಜೊತೆಗೆ ರಾಜ್ಯ ಸಮಾವೇಶಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಹಿರಿಯ ಮಹಿಳಾ ಉಪಾಧ್ಯಕ್ಷೆ ಹಾಗೂ ವಿವಿಧ ಸಮಿತಿಗಳ ಮೇಲ್ವಿಚಾರಕರಾಗಿರುವ ಕವಿತ, ಜಯಂತಿ ಎಂ.ಆರ್, ಪ್ರಶಸ್ತಿ ಪತ್ರಗಳ ಸಿದ್ಧತಾ ಸಮಿತಿಯ ಮುಖ್ಯಸ್ಥ ಜಿಲ್ಲಾ ಕಾರ್ಯದರ್ಶಿ ಬಿ ಎಂ ಮುನಿರಾಮಯ್ಯ ವೇದಿಕೆ ಸಮಿತಿಯ ಮುಖ್ಯಸ್ಥ ಬೆಂಗಳೂರು ವಿಭಾಗೀಯ ಕಾರ್ಯಾಧ್ಯಕ್ಷ ವೇಣುಗೋಪಾಲ್ ಸಾಂಸ್ಕöÈತಿಕ ಸಮಿತಿಯ ಮುಖ್ಯಸ್ಥ ಕೆ ಸಿ ಮುನಿರಾಜು ಜಿಲ್ಲಾ ಕಾರ್ಯಧ್ಯಕ್ಷ ಗಿರೀಶ್ ಕುಮಾರ್ ಹಿರಿಯ ಉಪಾಧ್ಯಕ್ಷರಾದ ರಾಧಮ್ಮ ವೆಂಕಟೇಶ್ ಗೌಡ ಖಜಾಂಚಿ ಟಿ ಮಂಜುನಾಥ ಚಾರಿ ಉಪಾಧ್ಯಕ್ಷ ಕೃಷ್ಣೇಗೌಡ ಕೋಲಾರ ತಾಲ್ಲೂಕು ಅಧ್ಯಕ್ಷ ಸತೀಶ್ ಕುಮಾರ್ ಮುಳಬಾಗಿಲು ಅಧ್ಯಕ್ಷ ನರಸಿಂಹಮೂರ್ತಿ ಪದಾಧಿಕಾರಿಗಳಾದ ಮಂಜುನಾಥ ರವಿ ಪ್ರದೀಪ್ ವಿನಯ್ ಕುಮಾರ್ ಮತ್ತಿತರರಿದ್ದರು.

ಚಿತ್ರ : ಕೋಲಾರದ ಡಿಡಿಪಿಐ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್ ಚೌಡಪ್ಪ ಜಿಲ್ಲಾ ಸಂಘಕ್ಕೆ ರಾಜ್ಯ ಸಮಾವೇಶಕ್ಕೆ ಆಹ್ವಾನ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande