
ಕೊಪ್ಪಳ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಅಪರಾದಿ ವಿರುಪಾಕ್ಷಪ್ಪ ತಂದೆ ಸಿದ್ದಪ್ಪ ಈತನು ಪಿರ್ಯಾದಿದಾರ/ಬಾಧಿತ ಅಜಯಕುಮಾರ ತಂದೆ ಮೋತಿಲಾಲ ಜಾಂಗಡಾ ಇವರ ಜೊತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಬಾದಿತ ಅಜಯಕುಮಾರ ಇವರಿಗೆ ಮೈಕೈಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುವ ಆರೋಪ ಸಾಬಿತಾಗಿದೆ ಎಂದು ಮಾನ್ಯ ಕೊಪ್ಪಳದ 1ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಧೀಶರು, ಅಪರಾಧಿಗೆ ಶಿಕ್ಷೆ ವಿಧಿಸಿರುತ್ತಾರೆ.
ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯ ಕುಟಗನಹಳ್ಳಿ ಸೀಮಾದಲ್ಲಿರುವ ಸರ್ವೇ ನಂ: 17 ರಲ್ಲಿ ಪಿರ್ಯಾದಿದಾರ/ಬಾಧಿತ ಅಜಯಕುಮಾರ ಈತನು ಅರವಿಂದ ತಂದೆ ಮರಿಸ್ವಾಮಿ ಅಣ್ಣಿಗೇರಿ ಇವರಿಂದ ಜಮೀನು ಸರ್ವೇ ಮಾಡಿಸಲು ಪ್ರಾರಂಭಿಸುವ ಕಾಲಕ್ಕೆ ಅಪರಾದಿ ವಿರುಪಾಕ್ಷಪ್ಪ ಈತನು ಅತೀಕ್ರಮ ಪ್ರವೇಶ ಮಾಡಿ ಜಮೀನು ಮಾಲೀಕರಾದ ಅಜಯಕುಮಾರ ತಂದೆ ಮೋತಿಲಾಲ ಜಾಂಗಡಾ ಇವರಿಗೆ ಮಾಡಿಸದಂತೆ ಅವಾಚ್ಯ ಶಬ್ದಗಳಿಂದ ಬೈಯ್ದು ಅವರೊಂದಿಗೆ ಜಗಳ ತೆಗೆದು ಕೈಯಿಂದ ಅವರ ಮೈ ಕೈಗೆ ಹಲ್ಲೆ ಮಾಡಿ ಸರ್ವೇ ಮಾಡಲು ಬಂದ ಅರವಿಂದ ಇವರಿಗೂ ಸಹ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿ ಪಿರ್ಯಾದಿದಾರ/ಬಾಧಿತ ಅಜಯಕುಮಾರ ಇವರಿಗೆ ಸರ್ವೆ ನಡೆಸಿದಲ್ಲಿ ಜಮೀನಿನಲ್ಲಿ ಹೂತು ಹಾಕುವುದಾಗಿ ಜೀವ ಬೆದರಿಕೆ ಹಾಕಿರುವುದು ಆರೋಪ ಸಾಬೀತಾಗಿದ್ದು, ದಿನಾಂಕ: 06-10-2016 ರಂದು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣಾ ಗುನ್ನೆ ನಂ: 205/2016 ಕಲಂ: 447, 323, 186, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಂದಿನ ತನಿಖಾಧಿಕಾರಿ ರಾಮಪ್ಪ, ಹೆಚ್‍ಸಿ-138 ಕೊಪ್ಪಳ ಇವರು ತನಿಖೆ ಮಾಡಿ ಪರಾಧಿಯ ಮೇಲೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಬಹದ್ದೂರುಬಂಡಿ ಗ್ರಾಮದ ವಿರುಪಾಕ್ಷಪ್ಪ ತಂದೆ ಸಿದ್ದಪ್ಪ ಇತನ ಮೇಲಿರುವ ಆರೋಪಗಳು ಸಾಬೀತಾಗಿವೆ ಎಂದು ಕೊಪ್ಪಳದ 1ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ತ್ರೀವೇಣಿ ಈರಗಾರ ರವರು ಅಪರಾಧಿಗೆ 09 ತಿಂಗಳು ಜೈಲು ಶಿಕ್ಷೆ ಹಾಗೂ ರೂ. 1300 ಗಳ ದಂಡ ವಿಧಿಸಿ ದಿ: 17-02-2026 ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಭಾರತಿ ವಾಡೇಕರ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿನ ಕೊಪ್ಪಳ ಗ್ರಾಮೀಣ ಪೊಲೀಸರಾದ ಮಹೇಶಕುಮಾರ ಸಿಹೆಚ್‍ಸಿ-145, ರವಿಕುಮಾರ ಪಿಸಿ-557, ರಾಘವೇಂದ್ರ ಪಿಸಿ-600, ಶೇಕ್ಷಾವಲಿ ಹೆಚ್‍ಸಿ-122, ಕೆಂಚಪ್ಪ ಹೆಚ್‍ಸಿ-69 ಇವರು ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಎಂದು ಕೊಪ್ಪಳದ 1ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್