
ತೆಕ್ಕಲಕೋಟೆ, 18 ಫೆಬ್ರವರಿ (ಹಿ.ಸ.) :
ಆ್ಯಂಕರ್ : ತೆಕ್ಕಲಕೋಟೆಯ 01ನೇ ವಾರ್ಡ್ನ ನಿವಾಸಿ ಯಮನೂರಪ್ಪ (15) ಬಾಲಕ ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋದವನು ಮನೆಗೆ ಬಾರದೇ ಫೆ.17 ರಂದು ಕಾಣೆಯಾಗಿದ್ದು, ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಮನವಿ ಮಾಡಿದ್ದಾರೆ.
ಚಹರೆ: ಎತ್ತರ 5.1 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲುಮುಖ ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ತಿಳಿ ನೀಲಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಅಂಗಿ ಧರಿಸಿರುತ್ತಾನೆ.
ಕಾಣೆಯಾದ ಬಾಲಕನ ಬಗ್ಗೆ ಮಾಹಿತಿ ದೊರೆತಲ್ಲಿ ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ದೂ.08396-248013, ಮೊ.9480803055, ಸಿಪಿಐ ದೂ.08396-248044, ಬಳ್ಳಾರಿ ಗ್ರಾಮೀಣ ಉಪವಿಭಾಗ ಡಿಎಸ್‌ಪಿ ದೂ.08392-276000, ಬಳ್ಳಾರಿ ಎಸ್‌ಪಿ ದೂ.08392-258400 ಗೆ ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್