ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಿಂದ: ಸಹಾಯಧನ ಅರ್ಜಿ ಆಹ್ವಾನ
ಬಳ್ಳಾರಿ, 18 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಆಹಾರ ವಾಹಿನಿ (ಆಹಾರಕಿಯೋಸ್ಕ್) ಯೋಜನೆಯಡಿ ಅರ್ಹರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಹಾರ ವಾಹಿನಿ (ಆಹಾರಕಿಯೋಸ್ಕ್) ಯೋಜನೆಯಡ
ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದಿಂದ: ಸಹಾಯಧನ ಅರ್ಜಿ ಆಹ್ವಾನ


ಬಳ್ಳಾರಿ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಆಹಾರ ವಾಹಿನಿ (ಆಹಾರಕಿಯೋಸ್ಕ್) ಯೋಜನೆಯಡಿ ಅರ್ಹರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಹಾರ ವಾಹಿನಿ (ಆಹಾರಕಿಯೋಸ್ಕ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದೆ. ನಿಗಮದಿಂದ ವಾಹನ ಖರೀದಿಗೆ ರೂ.03 ಲಕ್ಷ ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು. ಉಳಿಕೆ ಮೊತ್ತವನ್ನು ಬ್ಯಾಂಕ್, ಹಣಕಾಸು ಸಂಸ್ಥೆಗಳಿAದ ಸಾಲ ಪಡೆಯಬಹುದಾಗಿದೆ.

ಬಳ್ಳಾರಿ ನಗರ ಕ್ಷೇತ್ರದ ಹಿಂದುಳಿದ ವರ್ಗಗಳ ಪ್ರವರ್ಗ-1ರ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಮಾ.06 ಕೊನೆಯ ದಿನ.

ಸೌಲಭ್ಯ ಪಡೆಯಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1ರ (ಬೆಸ್ತರ್)ಬುಂಡ್, ಬ್ಯೆಲಪತರ್, ಬ್ಯೆರಾಗಿ(ಬಾವ), ಬಜಿನಿಯ, ಬಾಲಸಂತೋಶಿ-ಜೋಶಿ, ಬಾಜಿಗರ್, ಭರಢಿ, ಬುಡುಬುಡಕಿ-ಜೋಶಿ-ಗೋಂಧಳಿ, ಚಾರ, ಚಿತ್ರಕಶಿ-ಜೋಶಿ, ದರ್ವೇಶ್, ದವೇರಿ, ಧೋಲಿ, ದೊಂಬರಿ, ದೊಂಬಿದಾಸ, ದುರ್ಗಮುರ್ಗ (ಬುರ್ಬುರುಚ), ಗರಡಿ, ಘಿಸಡಿ, ಗೊಲ್ಲ, ಗೊಂದಳಿ, ಗೋಪಲ್, ಹೆಳವ, ಹಾವ್ಗಾರ(ಹಾವಡಿಗರ್), ಜೋಗಿ, ಜೋಶಿಸಾದ ಜೋಶಿ, ಕಾಶಿಕಪಾಡಿ, ಕಟಬು, ಕೆಲ್ಕಾರಿ, ಕಿಳ್ಳೆ ಕ್ಯಾತಸ್, ಕೊಲಾತಿ, ಮಸನಿಯ ಯೋಗಿ, ನಂದಿವಾಲ-ಜೋಶಿ-ಘೊ0ಡಲ್-ಪುಲ್ಮಲ್ಲಿ, ನಾಥಪಂಥಿ, ಡೌರಿಗೋಸಾವಿ, ನೀರ್ಶಿಕಾರಿ, ಪಂಗಲ್, ಪಿಚಗುಂಟಲು, ಸನ್ಸಿಯ, ಸರಾನಿಯ, ಸರೊಡಿ, ಶಿಕ್ಕಲಿಗಾರ್, ತಿರುಮಲಿ, ಪಡಿ, ವಗ್ರಿ, ವ್ಯಡು, ವಾಸುದೇವ್, ವಿರ್ಪ್ರವರ್ಗ-1 ಸೇರಿದಂತೆ ಈ ಎಲ್ಲಾ ಜಾತಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ರೂ.3,00,000 ಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು.

ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು, (ಶ್ರೀ/ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಇತರೆ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು.

ಒ0ದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಅಭಿವೃದ್ದಿ ನಿಗಮ(ನಿ), ಜಿಲ್ಲಾಡಳಿತ ಭವನ, ಬಿ ಬ್ಲಾಕ್, 2ನೇ ಮಹಡಿ, ಕೊಠಡಿ ಸಂ.53, ಅನಂತಪುರ ರಸ್ತೆ, ಬಳ್ಳಾರಿ ಕಚೇರಿ ಅಥವಾ ದೂ.08392-267038 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಅಭಿವೃದ್ದಿ ನಿಗಮ(ನಿ)ದ ಜಿಲ್ಲಾ ವ್ಯವಸ್ಥಾಪಕ ಭಾವಿಕಟ್ಟೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande