ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೇರವಣಿಗೆ , ಸಮಾವೇಶ
ಗದಗ, 18 ಫೆಬ್ರವರಿ (ಹಿ.ಸ.) ಆ್ಯಂಕರ್: ಪ್ರತಿ ವರ್ಷದಂತೆ ಈ ವರ್ಷ 2026 ರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಡೆಯಲಿದ್ದು, ವಿಶೇಷವಾಗಿ ಸಂತ ಶ್ರೀ ಸೇವಾಲಾಲ್ ಜಯಂತ್ಯೋತ್ಸವವನ್ನು ಆಚರಣೆ ಮಾಡಲಾಗುವುದು. ಇತ್ತಿಚೆಗೆ ಸಾವಿನಲ್ಲೂ ಸಾರ್ಥಕತೆ ಮೇರೆದು ಅಂಗಾಂಗ ದಾನ ಮಾಡಿದ ನಾರಾಯಣ ಹೊನ್ನಾಲ ಹಾಗೂ ಯಲ್ಲಪ
ಫೋಟೋ


ಗದಗ, 18 ಫೆಬ್ರವರಿ (ಹಿ.ಸ.)

ಆ್ಯಂಕರ್:

ಪ್ರತಿ ವರ್ಷದಂತೆ ಈ ವರ್ಷ 2026 ರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಡೆಯಲಿದ್ದು, ವಿಶೇಷವಾಗಿ ಸಂತ ಶ್ರೀ ಸೇವಾಲಾಲ್ ಜಯಂತ್ಯೋತ್ಸವವನ್ನು ಆಚರಣೆ ಮಾಡಲಾಗುವುದು. ಇತ್ತಿಚೆಗೆ ಸಾವಿನಲ್ಲೂ ಸಾರ್ಥಕತೆ ಮೇರೆದು ಅಂಗಾಂಗ ದಾನ ಮಾಡಿದ ನಾರಾಯಣ ಹೊನ್ನಾಲ ಹಾಗೂ ಯಲ್ಲಪ್ಪ ಕಾಂಬ್ಳೇಕರ ಭಾವಚಿತ್ರಗಳು ಮೇರವಣಿಗೆಯಲ್ಲಿ ರಾರಾಜಿಸಲಿವೆ ಅಂತ ಜಯಂತ್ಯೋತ್ಸವದ ಮಾಜಿ ಅಧ್ಯಕ್ಷ ಜಗದೀಶ್ ಎಸ್. ಪಿ ಹೇಳಿದರು.

ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭವ್ಯ ಮೇರವಣಿಗೆಯಲ್ಲಿ 17 ಅಡಿ ಎತ್ತರದ ಪ್ರಭು ಶ್ರೀರಾಮ, ಸಹಸ್ರಾರ್ಜುನ, ಮಹರ್ಷಿ ವಾಲ್ಮೀಕಿ, ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮ, ಪಾಂಡುರಂಗ ವಿಠ್ಠಲ ಸೇರಿದಂತೆ ಅನೇಕ ದಾರ್ಶನಿಕರ ಮೂರ್ತಿಗಳು ಇರಲಿದ್ದು, ಜಿಲ್ಲೆಯ ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಬೇಕು ಎಂದು ಜಗದೀಶ್ ಎಸ್. ಪಿ ಕರೆ ನೀಡಿದರು.

ಮುಖಂಡ ಅನಿಲ ಅಬ್ಬಿಗೇರಿ ಮಾತನಾಡಿ, ಕಳೆದ 10 ವರ್ಷದಿಂದ ಶಿವಾಜಿ ಜಯಂತಿ ಆಚರಣೆ ಮಾಡಿಕೊಂಡು ಬರಲಾಗಿದೆ. ಈ ಬಾರಿ ಸಂತ ಶ್ರೀ ಸೇವಾಲಾಲ್ ಜಯಂತಿ ಕೂಡ ನಡೆಯಲಿದೆ. ಮಹಾನ್ ಪುರುಷರ, ದಾರ್ಶನಿಕರ ಮೂರ್ತಿಗಳ ಮೇರವಣಿಗೆ ಮಾಡುವ ಮೂಲಕ ಅವರನ್ನು ನೆನೆಯುವ ಕೆಲಸ ಮಾಡಲಾಗುತ್ತದೆ. ರಾಚೋಟೇಶ್ವರ ದೇವಸ್ಥಾನದಿಂದ ಆರಂಭವಾದ ಮೇರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ದಿಕ್ಸೂಚಿ ಭಾಷಣಕಾರರಾಗಿ ಶ್ರೀ ಸೋಮಲಿಂಗ ಮಹಾಸ್ವಾಮಿಜಿಗಳು ಆಗಮಿಸಲಿದ್ದು, ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಸೇವಾಲಾಲ್ ಹಾಗೂ ಶಿವಾಜಿ ಮಹಾರಾಜರ ಕುರಿತು ಮಾತನಾಡಲಿದ್ದಾರೆ. ಜಿಲ್ಲೆಯ ಹಿಂದೂ ಸಮಾಜ ಬಾಂಧವರು ಕುಟುಂಬ ಸಮೇತವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೋಳಿಸಬೇಕು ಎಂದರು.

ಕರ್ನಾಟಕ ರಾಜ್ಯ ವಿವಿಧ ಹಿಂದೂ ಸಂಘಟನೆಗಳ ಸಂಚಾಲಕ ರಾಜು ಖಾನಪ್ಪನವರ ಮಾತನಾಡಿ, ಹಿಂದೂ ಸಂಘಟನೆಗೆ ಶಕ್ತಿ ತುಂಬುವ ಉದ್ದೇಶದಿಂದ ಹೋರಾಟ ಮತ್ತು ಭಕ್ತಿ ಅಳವಡಿಸಿಕೊಂಡು ಶ್ರೀ ಸೇವಾಲಾಲ್ ಹಾಗೂ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಮೇರವಣಿಗೆ ಪ್ರಾರಂಭಕ್ಕೂ ಮುನ್ನ ಗಜಾನನ ಸಮಿತಿಯಿಂದ 1,500 ಜನರಿಗೆ ಪ್ರಸಾದದ ವ್ಯವಸ್ಥೆ, 10 ರಿಂದ 12ಸಾವಿರ ಜನರಿಗೆ ಲೀಲಾ ಲೆವರ್ ಸಂಸ್ಥೆಯಿಂದ ಹತ್ತಿಕಾಳ ಕೂಟದಲ್ಲಿ ಊಟದ ವ್ಯವಸ್ಥೆ, ಬಟ್ಟೆ ವ್ಯಾಪಾರಸ್ಥರಿಂದ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ, ಕಾಮರತಿ ಉತ್ಸವ ಸಮಿತಿಯಿಂದ 10 ಸಾವಿರ ಜನರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.

ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಸಂತ ಶ್ರೀ ಸೇವಾಲಾಲ್ ಅವರ ಆದರ್ಶ ಪಾಲನೆ ಮಾಡಬೇಕು. ಹಿಂದೂ ಸಮಾಜವನ್ನು ಮೂರ್ಖರನ್ನಾಗಿ ಮಾಡಲು ಕೆಲವು ರಾಜಕೀಯ ನಾಯಕರು ಹಾಗೂ ಡೊಂಗಿ ಬಾಬಾಗಳು ಹೊರಟಿದ್ದಾರೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಿದೆ. ಸಮಾಜದಲ್ಲಿ ಜಾಗೃತಿಯ ಕ್ರಾಂತಿ ಆಗಬೇಕಿದೆ. ಡಿಜೆ ಮುಂದೆ ಕುಣಿದು, ಕೇಸರಿ ಶಾಲು ಹಾಕಿಕೊಂಡು ಜೈಕಾರ ಹಾಕಿದರೇ ಸಾಲದು. ಹಿಂದೂ ಸಮಾಜ ನಾಶ ಮಾಡಲು ಹೋರಟಿರುವ ಬಾಬಾಗಳ ವಿರುದ್ದ ಸಿಡಿದೆಳಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಕೆಲ ನಿರ್ಣಯ ಕೈಗೋಳ್ಳಲಾಗುವುದು. ಆ ನಿರ್ಣಯಕ್ಕೆ ಎಲ್ಲರೂ ಬದ್ದರಾಗಬೇಕು ಎಂದರು.

ಮರಾಠ ಹಾಗೂ ಲಂಬಾಣಿ ಸಮಾಜದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. 30 ರಿಂದ 50 ಸಾವಿರ ಜನರು ಭಾಗವಹಿಸುವ ನೀರಿಕ್ಷೆಯಿದೆ. ನೀರಿಕ್ಷೆಗೂ ಮೀರಿ ಹಿಂದೂ ಸಮಾಜದವರು ಆಗಮಿಸಿ, ತನು-ಮನ-ಧನದಿಂದ ಭಾಗವಹಿಸಬೇಕು. ಎಲ್ಲ ವ್ಯಾಪಾರಸ್ಥರು ಆ ದಿನ ನಡೆಯುವ ಸಾಯಂಕಾಲದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ರಾಜು ಖಾನಪ್ಪನವರ ಕರೆ ನೀಡಿದರು.

ಸಂತ ಶ್ರೀ ಸೇವಾಲಾಲ್ ಕೇವಲ ಲಂಬಾಣಿ ಸಮುದಾಯದವರಿಗೆ ಸಿಮಿತವಾಗಿರದೇ ಹಿಂದೂತ್ವಕ್ಕಾಗಿ ಹೋರಾಟ ಮಾಡಿ ಜಾಗೃತಿ ಮೂಡಿಸುತ್ತಿದ್ದರು. ಈ ಬಾರಿ ಶಿವಾಜಿ ಜಯಂತಿ ಜೊತೆಗೆ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಸಮಿತಿ ಅಧ್ಯಕ್ಷ ಪರಮೇಶ ನಾಯಕ್ ಹೇಳಿದರು.

ಈ ಸಂದರ್ಭದಲ್ಲಿ ಅಜ್ಜಣ್ಣ ಮಲ್ಲಾಡದ, ಕಿಸನ್ ಮೇರವಾಡೆ, ಮಹೇಶ್ ರೋಖಡೆ, ಕೃಷ್ಣಪ್ಪ ಲಮಾಣಿ, ರಾಜು ಗದ್ದಿ, ಸುನಿಲ ಮುಳ್ಳಾಳ, ವೀರೂಪಾಕ್ಷಪ್ಪ ಹೆಬ್ಬಳ್ಳಿ, ರಾಜು ಮುಧೋಳ, ಕುಮಾರ ನಡಗೇರಿ, ಕಿರಣ್ ಹಿರೇಮಠ, ಕೃಷ್ಣ ಪವಾರ್, ತುಕಾರಾಮ್ ಲಮಾಣಿ, ವಿಶಾಲ್ ಗೋಕಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande