ದ್ವಾರಕಾಮಯ ಫೌಂಡೇಶನ್‍ ವತಿಯಿಂದ ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬ
ಗದಗ, 18 ಫೆಬ್ರವರಿ (ಹಿ.ಸ.) : ಆ್ಯಂಕರ್ : ದ್ವಾರಕಾಮಯ ಫೌಂಡೇಶನ್‍ ವತಿಯಿಂದ ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ದ್ವಾರಕಾಮಯ ಫೌಂಡೇಶನವತಿಯಿಂದ ಶ್ರೀಮತಿ ಗಾಯತ್ರಿ ವಿ. ಅವರ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದ
ಫೋಟೋ


ಗದಗ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ದ್ವಾರಕಾಮಯ ಫೌಂಡೇಶನ್‍ ವತಿಯಿಂದ ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ದ್ವಾರಕಾಮಯ ಫೌಂಡೇಶನವತಿಯಿಂದ ಶ್ರೀಮತಿ ಗಾಯತ್ರಿ ವಿ. ಅವರ ಹುಟ್ಟುಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡು ಸಿಹಿಯೊಂದಿಗೆ ಊಟವನ್ನು ವಿತರಿಸಿದರು.

ದ್ವಾರಕಾಮಯ ಫೌಂಡೇಶನ ಸಂಸ್ಥಾಪಕರಾದ ಶ್ರೀ ವಿನಾಯಕ ಆರ್. ಶ್ರೀ ವಿ.ಎಮ್.ಅಡ್ನೂರವರು ಉಪಹಾರ ವಿತರಣೆ ಮಾಡಿದರು. ವಿತರಣಾ ಕಾರ್ಯಕ್ರಮದಲ್ಲಿ ದ್ವಾರಕಾಮಯ ಫೌಂಡೇಶನ್‍ನ ಶ್ರೀ ಈರಣ್ಣಾ ಎಸ್. ಗಾಣಗೇರವರು ಮಾತನಾಡಿ, ಸಮಾಜದಲ್ಲಿ ಅತೀ ಅವಶ್ಯಕವಾದ & ಕಷ್ಟಕರ ಸೇವೆಯನ್ನು ಕೈಗೆತ್ತಿಗೊಂಡು ವಿಶೇಷ ಮಕ್ಕಳಿಗೆ ತಾಳ್ಮೆಯಿಂದ ತರಬೇತಿ ನೀಡುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ. ಈ ಸೇವಾ ಕಾರ್ಯವನ್ನು ನಾವು ನಿವೆಲ್ಲಾ ಸೇರಿ ಮೇಲತ್ತುವುದರೊಂದಿಗೆ ಸಹಾಯ-ಸಹಕಾರ ಮಾಡೋಣವೆಂದು ಹೇಳುತ್ತಾ, ಇಂದು ಎಲ್ಲ ಮಕ್ಕಳಿಗೆ ಶ್ರೀಮತಿ ಗಾಯತ್ರಿ ವಿ. ಅವರ ಹುಟ್ಟುಹಬ್ಬದ ನಿಮಿತ್ಯ ಸಿಹಿಯೊಂದಿಗೆ ಊಟವನ್ನು ವಿತರಣೆಯನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಈ ವಿಶೇಷ ಶಾಲೆಗೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಸಮಾಜದ ಸಹಭಾಗಿತ್ವದೊಂದಿಗೆ ಈ ಸೇವ ಕಾರ್ಯವನ್ನು ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ಎಲ್ಲರ ಸಹಾಯ-ಸಹಕಾರ ಪಡೆದುಕೊಂಡು ವಿಶೇಷ ಮಕ್ಕಳು ಸ್ವಾವಲಂಬನೆ ಜೀವನ ನಡೆಸುವ ಹಾಗೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ತರಲಾಗುವುದು. ಇಂದು ದ್ವಾರಕಾಮಯ ಫೌಂಡೇಶನ್‍ವರು ಶ್ರೀಮತಿ ಗಾಯತ್ರಿ ವಿ. ಅವರ ಹುಟ್ಟುಹಬ್ಬದ ನಿಮಿತ್ಯ ವಿಶೇಷ ಮಕ್ಕಳಿಗೆ ಸಿಹಿಯೊಂದಿಗೆ ಊಟದ ವ್ಯವಸ್ಥೆಯನ್ನು ಮಾಡುವುದರ ಮೂಲಕ ಮಹತ್ವಪೂರ್ಣ ಸೇವೆಯನ್ನು ಮಾಡಿದ್ದಾರೆ. ಇವರಿಗೆ ಭಗವಂತ ಹೆಚ್ಚಿನ ಸೇವೆ ಮಾಡಲು ಶಕ್ತಿ ನೀಡಲೆಂದು ಹೇಳಿದರು.

ರಾಮುವರು, ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು, ಕೊನೆಗೆ ಎಲ್ಲರಿಗೂ ಉಪಹಾರ ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande