ನಾಳೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧ
ಗದಗ, 18 ಫೆಬ್ರವರಿ (ಹಿ.ಸ.): ಆ್ಯಂಕರ್: ಗದಗ ಬೆಟಗೇರಿ ಅವಳಿ ನಗರದಲ್ಲಿ ಜರುಗುವ ಸಂತ ಸೇವಾಲಾಲ್ ಮತ್ತು ಶಿವಾಜಿ ಜಯಂತಿ ಮೆರವಣಿಗೆ ಹಾಗೂ ಕಾರ್ಯಕ್ರಮ ಆಚರಣೆಯ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗದಗ ಶಹರ, ಬೆಟಗೇರಿ, ಬೆಟಗೇರಿ ಬಡಾವಣೆ, ಗದಗ ಗ್ರಾಮೀಣ, ಮುಳಗುಂದ ಪೊಲೀಸ್ ಠಾಣ
ಫೋಟೋ


ಗದಗ, 18 ಫೆಬ್ರವರಿ (ಹಿ.ಸ.):

ಆ್ಯಂಕರ್:

ಗದಗ ಬೆಟಗೇರಿ ಅವಳಿ ನಗರದಲ್ಲಿ ಜರುಗುವ ಸಂತ ಸೇವಾಲಾಲ್ ಮತ್ತು ಶಿವಾಜಿ ಜಯಂತಿ ಮೆರವಣಿಗೆ ಹಾಗೂ ಕಾರ್ಯಕ್ರಮ ಆಚರಣೆಯ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗದಗ ಶಹರ, ಬೆಟಗೇರಿ, ಬೆಟಗೇರಿ ಬಡಾವಣೆ, ಗದಗ ಗ್ರಾಮೀಣ, ಮುಳಗುಂದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಫೆಬ್ರುವರಿ 19-2-2026 ರ ಬೆಳಗಿನ 6 ಗಂಟೆಯಿಂದ 20-2-2026 ರ ಬೆಳಗಿನ 6 ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಮದ್ಯ ಸಾಗಾಟವನ್ನು ನಿಷೇಧಿಸಲಾಗಿದೆ.

ಸದರ ದಿನಗಳಂದು ಗದಗ ಶಹರ, ಬೆಟಗೇರಿ, ಬೆಟಗೇರಿ ಬಡಾವಣೆ , ಗದಗ ಗ್ರಾಮೀಣ, ಮುಳಗುಂದ ಪೊಲೀಸ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಯಾವತ್ತೂ ಮದ್ಯದ ಅಂಗಡಿಗಳನ್ನು ಮೇಲ್ಕಾಣಿಸಿದ ಅವಧಿಯಲ್ಲಿ ಮುಚ್ಚತಕ್ಕದ್ದು. ಅಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ವಲಯ ಅಬಕಾರಿ ಇನ್ಸ್ಪೆಕ್ಟರ್ ಹಾಗೂ ಅಬಕಾರಿ ಉಪ ಆಯುಕ್ತರು, ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande