ಸಣ್ಣ ಘಟನೆ ಎಂದವರಿಗೆ ತಕ್ಕ ಉತ್ತರ : ಕ್ಯಾವಟರ್
ಕೊಪ್ಪಳ, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಪ್ರವಾಸಿ ತಾಣವಾಗಿರುವ ಸಾಣಾಪೂರ ಬಳಿ ಕಳೆದ ವರ್ಷ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಣ್ಣ ಘಟನೆ ಎಂದ ಜನಪ್ರತಿನಿಧಿಗೆ ಗಂಗಾವತಿ ನ್ಯಾಯಲಯ ‌ನೀಡಿರುವ ತೀರ್ಪು ತಕ್ಕ ಉತ್ತರವಾಗಿದೆ ಎಂದು ಲೋಕ ಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ
ಸಣ್ಣ ಘಟನೆ ಎಂದವರಿಗೆ ತಕ್ಕ ಉತ್ತರ : ಕ್ಯಾವಟರ್


ಸಣ್ಣ ಘಟನೆ ಎಂದವರಿಗೆ ತಕ್ಕ ಉತ್ತರ : ಕ್ಯಾವಟರ್


ಕೊಪ್ಪಳ, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಪ್ರವಾಸಿ ತಾಣವಾಗಿರುವ ಸಾಣಾಪೂರ ಬಳಿ ಕಳೆದ ವರ್ಷ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಣ್ಣ ಘಟನೆ ಎಂದ ಜನಪ್ರತಿನಿಧಿಗೆ ಗಂಗಾವತಿ ನ್ಯಾಯಲಯ ‌ನೀಡಿರುವ ತೀರ್ಪು ತಕ್ಕ ಉತ್ತರವಾಗಿದೆ ಎಂದು ಲೋಕ ಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಹೇಳಿದ್ದಾರೆ.

ಅಂದು ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ವಿದೇಶಿ ಪ್ರಜೆಯನ್ನು ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ ಗಂಗಾವತಿ ಸತ್ರ ನ್ಯಾಯಾಲಯ ಸೋಮವಾರ ಮರಣ ದಂಡನೆ ವಿಧಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ.

ಇಂತಹ ಘಟನೆ ಇಡೀ ಜಿಲ್ಲೆಯ ಇತಿಹಾಸದಲ್ಲಿ ಎಂದೆಂದೂ ನಡೆದಿರಲಿಲ್ಲ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಕರಿನೆರಳು ಬಿತ್ತು.

ಆದರೆ, ಇಂತಹ ಭೀಕರ ಘಟನೆಯನ್ನು ಸಣ್ಣ ಘಟನೆ ಎನ್ನುವ ಮೂಲಕ ಸಂಸದ ರಾಜಶೇಖರ ಹಿಟ್ನಾಳ್ ದುಂಡಾವರ್ತನೆ ತೋರಿದ್ದು ಸರಿಯಾದ ನಡೆಯಲ್ಲ.

ಅದು, ಕೇಂದ್ರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಪ್ರವಾಸೋದ್ಯಮ ಕುರಿತ ಕಾರ್ಯಕ್ರಮದಲ್ಲಿ ಸಂಸದ ಹಿಟ್ನಾಳ್, ಸಾಣಾಪೂರ ಗ್ರಾಮದ ಬಳಿ ಜರುಗಿದ ಘಟನೆಯನ್ನು ಸಣ್ಣ ಘಟನೆ ಎನ್ನುವ ಮೂಲಕ ಜಿಲ್ಲೆಯ ಮಾನ- ಮರ್ಯಾದೆ ಕಳೆದಿದ್ದರು.

ಇಂತಹ ಮನಸ್ಥಿತಿ ಹೊಂದಿದ ಹಿಟ್ನಾಳ್ ಅವರಿಗೆ ನ್ಯಾಯಲಯ ನೀಡಿರುವ ತೀರ್ಪು ಸರಿಯಾಗಿದೆ. ಇನ್ನಾದರೂ ಸಂಸದ ಹಿಟ್ನಾಳ್ ಅವರು, ಇಂತಹ ಹೇಳಿಕೆಗಳನ್ನು ಮಾತನಾಡುವುದನ್ನು ಬಿಡಬೇಕು. ಜತೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುಂದೆಂದೂ ಇಂತಹ ಘಟನೆ ಜರುಗದಂತೆ ನೋಡಿಕೊಳ್ಳಬೇಕೆಂದು ಕ್ಯಾವಟರ್ ಅವರು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande