ಹರ್ತಿ ಗ್ರಾಮದಲ್ಲಿ ವಿಬಿಜೀ ರಾಮ್ ಜೀ ಜನಜಾಗೃತಿ ಸಮಾವೇಶ
ಗದಗ, 17 ಫೆಬ್ರವರಿ (ಹಿ.ಸ.) ಆ್ಯಂಕರ್: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರದ ಗದಗ ಗ್ರಾಮೀಣ ಮಂಡಲದ ವ್ಯಾಪ್ತಿಯ ಹರ್ತಿ ಗ್ರಾಮದಲ್ಲಿ ವಿಬಿಜೀ ರಾಮ್ ಜೀ ಜನಜಾಗೃತಿ ಸಮಾವೇಶ ಜರುಗಿತು. ಸಮಾವೇಶದ ಅಧ್ಯಕ್ಷತೆಯನ್ನ
ಫೋಟೋ


ಗದಗ, 17 ಫೆಬ್ರವರಿ (ಹಿ.ಸ.)

ಆ್ಯಂಕರ್: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ಗದಗ ವಿಧಾನಸಭಾ ಕ್ಷೇತ್ರದ ಗದಗ ಗ್ರಾಮೀಣ ಮಂಡಲದ ವ್ಯಾಪ್ತಿಯ ಹರ್ತಿ ಗ್ರಾಮದಲ್ಲಿ ವಿಬಿಜೀ ರಾಮ್ ಜೀ ಜನಜಾಗೃತಿ ಸಮಾವೇಶ ಜರುಗಿತು.

ಸಮಾವೇಶದ ಅಧ್ಯಕ್ಷತೆಯನ್ನು ಗದಗ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಬೂದಪ್ಪ ಹಳ್ಳಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ (ರಾಜು) ಕುರುಡಗಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಹಿತಕಾರಿ ಯೋಜನೆಗಳು ಸಮಾಜದ ಎಲ್ಲಾ ವರ್ಗಗಳಿಗೆ ತಲುಪಬೇಕು. ಅದರ ಸದುಪಯೋಗವನ್ನು ಜನರು ಪಡೆಯಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ನಿಂಗಪ್ಪ ಹುಗ್ಗಿ, ಖಜಾಂಚಿ ನಾಗರಾಜ ಕುಲಕರ್ಣಿ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಹಳ್ಳೂರಮಠ, ಸುಭಾಸ ಸುಂಕದ ಮಾತನಾಡಿ, ವಿಬಿಜೀ ರಾಮ್ ಜೀ ಯೋಜನೆಯ ಉದ್ದೇಶ ಮತ್ತು ಅದರ ಮಹತ್ವವನ್ನು ವಿವರಿಸಿದರು.

ಸಮಾವೇಶದಲ್ಲಿ ಮುಖಂಡರಾದ ಭದ್ರೇಶ ಕುಸ್ಲಾಪೂರ, ಬಿ.ಎಸ್. ಚಿಂಚಲಿ, ಸಿದ್ದಪ್ಪ ಜೊಂಡಿ, ಸೋಮರೆಡ್ಡಿ ನಡೂರ, ಡಿ.ಬಿ. ಕರೀಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಲ್ಲದೇ ಗ್ರಾಮದ ಪ್ರಮುಖರಾದ ಮಹೇಶ ಕಮ್ಮಾರ, ಹುಚ್ಚಪ್ಪ ಆರೇರ, ಮಂಜು ಗುಡದೂರ, ಯಲ್ಲಪ್ಪ ತಿಪ್ಪಣ್ಣವರ, ಸಂಗಪ್ಪ ಗಡಾದ, ರವಿಗೌಡ್ರ ಪಾಟೀಲ, ಜಿನ್ನಪ್ಪ ಪುಟ್ಟಮ್ಮನವರ, ರಾಚಪ್ಪ ನವಲಿ, ಬಸವರಾಜ ಹರ್ಲಾಪೂರ, ಜಡಿಯಪ್ಪ ಲದ್ದಿ, ಚನ್ನಪ್ಪ ಗುಡದೂರ, ಮಲ್ಲಪ್ಪ ಹೊನ್ನಪ್ಪನವರ, ಬಸವರಾಜ ಕುರ್ತಕೋಟಿ, ಕುಮಾರ ನಾವಳ್ಳಿ, ಶೇಖಪ್ಪ ಮಡಿವಾಳರ, ರಾಜು ಕುಲಕರ್ಣಿ, ಗಂಗಯ್ಯ ತಾಳಿಕೋಟಿಮಠ, ಸೋಮಣ್ಣ ಬಂಡಿವಡ್ಡರ, ಸುನೀಲ ಕುರ್ತಕೋಟಿ, ಮುತ್ತಣ್ಣ ಹುಲ್ಲೂರ, ಆನಂದ ಬಡಿಗೇರ, ಹನುಮಂತ ಕೆಂಚನಗೌಡ್ರ, ರವಿ ವಗ್ಗನವರ, ಮಹಾದೇವಪ್ಪ ಹಡಪದ ಸೇರಿದಂತೆ ಗ್ರಾಮೀಣ ಭಾಗದ ಅನೇಕ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾವೇಶವು ಯಶಸ್ವಿಯಾಗಿ ಜರುಗಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಯಿತು ಎಂದು ಸಂಘಟಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande