ಕೊಪ್ಪಳ : ಕಾಣೆಯಾದ ಬಾಲಕರ ಪತ್ತೆಗೆ ಮನವಿ
ಕೊಪ್ಪಳ, 17 ಫೆಬ್ರವರಿ (ಹಿ.ಸ.) ಆ್ಯಂಕರ್ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ವಾರಿ ಚಾಪೆಲ್‌ನ ನಂಬಿಕೆ ಮನೆಯಲ್ಲಿ ಆಶ್ರಯ ಪಡೆದಿದ್ದ ದಿನೇಶ(17 ವರ್ಷ 1 ತಿಂಗಳು) ಹಾಗೂ ಕುಮಾರಸ್ವಾಮಿ(16 ವರ್ಷ 7 ತಿಂಗಳು) ಎಂಬ ಇಬ್ಬರು ಬಾಲಕರು ಜನವರಿ 8 ರಂದು ಬೆಳಿಗ್ಗೆ 9.45 ಗಂಟೆಯಿ0ದ ನಾಪತ್ತೆಯಾಗಿದ
ಕೊಪ್ಪಳ : ಕಾಣೆಯಾದ ಬಾಲಕರ ಪತ್ತೆಗೆ ಮನವಿ


ಕೊಪ್ಪಳ : ಕಾಣೆಯಾದ ಬಾಲಕರ ಪತ್ತೆಗೆ ಮನವಿ


ಕೊಪ್ಪಳ, 17 ಫೆಬ್ರವರಿ (ಹಿ.ಸ.)

ಆ್ಯಂಕರ್ : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ವಾರಿ ಚಾಪೆಲ್‌ನ ನಂಬಿಕೆ ಮನೆಯಲ್ಲಿ ಆಶ್ರಯ ಪಡೆದಿದ್ದ ದಿನೇಶ(17 ವರ್ಷ 1 ತಿಂಗಳು) ಹಾಗೂ ಕುಮಾರಸ್ವಾಮಿ(16 ವರ್ಷ 7 ತಿಂಗಳು) ಎಂಬ ಇಬ್ಬರು ಬಾಲಕರು ಜನವರಿ 8 ರಂದು ಬೆಳಿಗ್ಗೆ 9.45 ಗಂಟೆಯಿ0ದ ನಾಪತ್ತೆಯಾಗಿದ್ದು, ಬಾಲಕರನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 04/2026, ಭಾರತೀಯ ನ್ಯಾಯ ಸಂಹಿತೆ ಕಲಂ 137(2) ಅಡಿ ಪ್ರಕರಣ ದಾಖಲಿಸಲಾಗಿದೆ.

ಕಾಣೆಯಾದ ಬಾಲಕರ ಚಹರೆ ವಿವರ:

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಗೊರೆಬಾಳದ ದಿನೇಶ ತಂದೆ ನಿಂಗಪ್ಪ ಎಂಬ 17 ವರ್ಷದ ಬಾಲಕ 158 ಸೆಂಟಿ ಮೀಟರ್ ಎತ್ತರವಿದ್ದು, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ಕಡು ಗ್ರೇ ಬಣ್ಣದ ಸ್ವೆಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು. ಯಲಬುರ್ಗಾ ತಾಲ್ಲೂಕಿನ ಮಾರನಾಳ ಗ್ರಾಮದ ಕುಮಾರಸ್ವಾಮಿ ತಂ.ಯಮನೂರಪ್ಪ ಎಂಬ ವರ್ಷದ ಬಾಲಕ 167 ಸೆಂಟಿ ಮೀಟರ್ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ತಿಳಿ ಹಸಿರು ಬಣ್ಣದ ಶರ್ಟ್ ಮತ್ತು ಕ್ರೀಂ ಬಣ್ಣದ ಪ್ಯಾಂಟ್ ಧರಿಸಿದ್ದನು.

ಮೇಲ್ಕಂಡ ಚಹರೆಯ ಬಾಲಕರ ಬಗ್ಗೆ ಯಾರಿಗಾದರೂ ಮಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ ದೂ.ಸಂ: 08539-221233, ಪಿ.ಐ: 8073476715, ತನಿಖಾಧಿಕಾರಿ ಸೂರ್ಯಕಾಂತ, ಎ.ಎಸ್.ಐ: 97438421109, ಕೊಪ್ಪಳ ಕಂಟ್ರೋಲ್ ರೂಂ.: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande