
ಗದಗ, 17 ಫೆಬ್ರವರಿ (ಹಿ.ಸ.)
ಆ್ಯಂಕರ್:
ಗದಗ ಜಿಲ್ಲೆ ಮುಂಡರಗಿ ತಾಲೂಕು ಸಿಂಗಟಾಲೂರು ಗ್ರಾಮದಲ್ಲಿ ಶಿವರಾತ್ರಿ ದಿನ ದುಷ್ಕರ್ಮಿಗಳು ಈಶ್ವರ, ನಂದಿ, ಹೊನ್ನತ್ತಿದೇವಿ ಮೂರ್ತಿಗಳನ್ನು ಭಗ್ನಗೊಳಿಸಿರುವದು ದುರ್ಧೈವದ ಸಂಗತಿ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಶಿವರಾತ್ರಿ ಹಬ್ಬದ ವಿಶೇಷ ದಿನದಂದು ಹಿಂದೂಗಳು ಎಲ್ಲ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೊಮ, ಹವಣ ಇತ್ಯಾದಿ ಪೂಜೆ ಪುನಸ್ಕರಾದಲ್ಲಿ ಬೆರೆತಿದ್ದು, ಇತ್ತ ಮುಂಡರಗಿ ತಾಲೂಕು ಸಿಂಗಟಾಲೂರ ಗ್ರಾಮದಲ್ಲಿ ದೇವರ ಮೂತಿಗಳನ್ನ ಭಗ್ನಗೊಳಿಸಿರುವದು ಕಾಂಗ್ರೇಸ್ ಆಡಳಿತದ ಸರ್ಕಾರದಲ್ಲಿ ಹಿಂದೂಗಳಿಗೂ ರಕ್ಷಣೆ ಇಲ್ಲಾ ಹಾಗು ದೇವರ ಮೂರ್ತಿಗಳಿಗೂ ರಕ್ಷಣೆ ಇಲ್ಲದಂತಾಗಿದೆ. ಈ ಕಾಂಗ್ರೇಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಿಗೆಟ್ಟಿರುತ್ತದೆ. ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗು ರಾಜ್ಯ ಕಾನೂನು ಸಚಿವರ ತವರಿನಲ್ಲಿಯೇ ಕಾನೂನು ಸಂಪೂರ್ಣ ಹದಿಗೆಟ್ಟಿರುವದು ಸಾಬಿತಾಗಿದೆ.
ಆ ಕೀಡಗೇಡಿಗಳು ಕೇವಲ ಸಿಂಗಟಾಲೂರು ಗ್ರಾಮದಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಇಂತಹ ಹಿಂದೂಗಳ ದೇವಸ್ಥಾನಗಳಲ್ಲಿನ ಮೂರ್ತಿಗೆ ಧಕ್ಕೆ ಮಾಡುವಂತಹ ಕೆಲಸ ನಡೆಯುತ್ತಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬರುತ್ತಿದ್ದು, ಸೌಹಾರ್ಧ ವಾತಾವರಣ ನಿರ್ಮಾಣವಾಗಬೇಕಾದರೆ ಇಂತಹ ಕೃತ್ಯಗಳನ್ನು ಎಸಗಿದವರನ್ನು ಶೀಘ್ರ ಪತ್ತೆ ಹಚ್ಚಿ ಕೂಡಲೇ ಬಂದಿಸಬೇಕು ಇಲ್ಲವಾದರೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಗದಗ ಜಿಲ್ಲೆಯಲ್ಲಿ ಉಗ್ರವಾದ ಹೋರಾಟ ಮಾಡಲಾಗುವದು ಎಂದು ರಾಜು ಕುರುಡಗಿರವರ ಕಾಂಗ್ರೇಸ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP