ಥೇಲ್ಸ್ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರಯೋಗಾಲಯ ಉದ್ಘಾಟನೆ
ಬೆಂಗಳೂರು, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಬೆಂಗಳೂರಿನಲ್ಲಿರುವ ಥೇಲ್ಸ್ ಗ್ರೂಪ್ ಕಂಪನಿಯ ಎಂಜಿನಿಯರಿಂಗ್ ಸಾಮರ್ಥ್ಯ ಕೇಂದ್ರದಲ್ಲಿ ಥೇಲ್ಸ್ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರಯೋಗಾಲಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಭಾರತದಲ್ಲಿ ಥೇಲ್
Inauguration


ಬೆಂಗಳೂರು, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬೆಂಗಳೂರಿನಲ್ಲಿರುವ ಥೇಲ್ಸ್ ಗ್ರೂಪ್ ಕಂಪನಿಯ ಎಂಜಿನಿಯರಿಂಗ್ ಸಾಮರ್ಥ್ಯ ಕೇಂದ್ರದಲ್ಲಿ ಥೇಲ್ಸ್ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರಯೋಗಾಲಯವನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಭಾರತದಲ್ಲಿ ಥೇಲ್ಸ್ ಗ್ರೂಪ್‌ನ ಬೆಳೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿ ಹೆಜ್ಜೆಯ ಹೆಗ್ಗುರುತಾಗಿದೆ. ಫ್ರೆಂಚ್ ಬಹುರಾಷ್ಟ್ರೀಯ ಏರೋಸ್ಪೇಸ್ ಮತ್ತು ರಕ್ಷಣಾ ತಂತ್ರಜ್ಞಾನ ನಾಯಕನಾಗಿರುವ ಥೇಲ್ಸ್, ಏಳು ದಶಕಗಳಿಗೂ ಹೆಚ್ಚು ಸಮಯದಿಂದ ಭಾರತದ ವಿಶ್ವಾಸಾರ್ಹ ಪಾಲುದಾರನಾಗಿದೆ. ಬೆಂಗಳೂರಿನಲ್ಲಿನ ಅದರ ಕಾರ್ಯಾಚರಣೆಯು ಅದರ ಜಾಗತಿಕ ಎಂಜಿನಿಯರಿಂಗ್ ಮತ್ತು ನಾವೀನ್ಯತಾ ಇಕೋ ಸಿಸ್ಟಂನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಭಾರತದಲ್ಲಿ ಥೇಲ್ಸ್‌ನ ಮೊದಲ ಮತ್ತು ಜಾಗತಿಕವಾಗಿ ಐದನೇ ಸಂಶೋಧನಾ ಕೇಂದ್ರವಾಗಿರುವ ಈ ಹೊಸ ಕೇಂದ್ರವು, ಮಾನವ-ಕೇಂದ್ರಿತ ಎಐ, ಕ್ವಾಂಟಮ್ ಕಂಪ್ಯೂಟಿಂಗ್, ಎಡ್ಜ್ ಕಂಪ್ಯೂಟಿಂಗ್, ಭವಿಷ್ಯದ ಸಂಪರ್ಕ ಹಾಗೂ ಮುಕ್ತ ನಾವೀನ್ಯತೆ ಮುಂತಾದ ಅತ್ಯಾಧುನಿಕ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ.

ಬೆಂಗಳೂರಿನ ಎಂಜಿನಿಯರಿಂಗ್ ಪ್ರತಿಭೆಯ ಅಗಾಧ ಸಂಪತ್ತು ಮತ್ತು ಪ್ರಬುದ್ಧ ನಾವೀನ್ಯತಾ ಇಕೋ ಸಿಸ್ಟಂ, ಥೇಲ್ಸ್‌ನ ಮುಂದುವರಿದ ಆರ್ & ಡಿ ಮಹತ್ವಾಕಾಂಕ್ಷೆಗಳಿಗೆ ಇದನ್ನು ಅತ್ಯಂತ ಸೂಕ್ತ ನೆಲೆಯನ್ನಾಗಿಸಿದೆ. ಇದು ವಿಶ್ವಾದ್ಯಂತ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಜ್ಞಾನ ರಾಜಧಾನಿಯಾಗಿರುವ ಕರ್ನಾಟಕದ ಕುರಿತು ಬಲಗೊಳ್ಳುತ್ತಿರುವ ಜಾಗತಿಕ ಹೂಡಿಕೆದಾರರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande