
ಸಿರುಗುಪ್ಪ, 17 ಫೆಬ್ರವರಿ (ಹಿ.ಸ.)
ಆ್ಯಂಕರ್ : ಸಿರುಗುಪ್ಪ ನಗರಸಭೆಯ 2026-27 ನೇ ಸಾಲಿನ ಆಯವ್ಯಯ ಮುಂಗಡ ಪತ್ರ ತಯಾರಿಕೆ ಕುರಿತಂತೆ ಕಚೇರಿಯ ಅಂಕಿ ಅಂಶ ಆಧರಿಸಿ ಆಯ-ವ್ಯಯದ ಬಗ್ಗೆ ಅವಲೋಕನೆ ಮಾಡಲು ಫೆ.19 ರಂದು ಬೆಳಿಗ್ಗೆ 11.30 ಗಂಟೆಗೆ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ 2ನೇ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಿರುಗುಪ್ಪ ನಗರಸಭೆ ವ್ಯಾಪ್ತಿಯ ಹಿರಿಯ ನಾಗರೀಕರಿಗೆ, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಪ್ರಮುಖ ವ್ಯಾಪಾರಸ್ಥರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರು-ಸದಸ್ಯರು, ವೃತ್ತಿಪರ ವ್ಯಕ್ತಿಗಳು, ಮಾಧ್ಯಮದವರು, ವಸತಿ ಕಲ್ಯಾಣ ಸಂಸ್ಥೆಗಳು ಹಾಗೂ ಇತರೆ ಗಣ್ಯವ್ಯಕ್ತಿಗಳು ಭಾಗವಹಿಸಿ 2026-27ನೇ ಸಾಲಿನ ಆಯ-ವ್ಯಯ ಮುಂಗಡ ಪತ್ರದ ಬಗ್ಗೆ ಅವಲೋಕನೆ ನಡೆಸಿ ತಮ್ಮ ಸೂಕ್ತ ಅಭಿಪ್ರಾಯ, ಸಲಹೆ ನೀಡಬಹುದು ಎಂದು ಸಿರುಗುಪ್ಪ ನಗರಸಭೆಯ ಪೌರಾಯುಕ್ತ ಗಂಗಾಧರ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್