ಮಾನವ, ಪರಿಸರ ಬಂಧುತ್ವ ಅವಿನಾಭಾವ : ಕ್ವಿಟ್ ಬಲ್ಡೋಟ
ಕೊಪ್ಪಳ, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ನಗರಸಭೆ ಆವರಣದಲ್ಲಿ 110ನೇ ದಿನದಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿಗೆ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮಂಡಳಿ ಬೆಂಬಲಿಸಿತು. ಎಂಬಿವಿ ರಾಜ್ಯ ಮುಖಂಡರಾದ ಟಿ. ರತ್ನಾಕರ ಅವರು ಮಾತನಾಡಿ, ಕೊಪ್ಪಳ, ಗಿಣಿಗೇರಿ ಕೇಂದ್ರೀಕರಿಸಿ ಸ್ಥಾಪಿಸಿದ ವಿಷಾನಿಲ ಉಗುಳುವ
ಮಾನವ, ಪರಿಸರ ಬಂಧುತ್ವ ಅವಿನಾಭಾವ : ಕ್ವಿಟ್ ಬಲ್ಡೋಟ


ಕೊಪ್ಪಳ, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ನಗರಸಭೆ ಆವರಣದಲ್ಲಿ 110ನೇ ದಿನದಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿಗೆ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮಂಡಳಿ ಬೆಂಬಲಿಸಿತು. ಎಂಬಿವಿ ರಾಜ್ಯ ಮುಖಂಡರಾದ ಟಿ. ರತ್ನಾಕರ ಅವರು ಮಾತನಾಡಿ, ಕೊಪ್ಪಳ, ಗಿಣಿಗೇರಿ ಕೇಂದ್ರೀಕರಿಸಿ ಸ್ಥಾಪಿಸಿದ ವಿಷಾನಿಲ ಉಗುಳುವ ಕಾರ್ಖಾನೆಗಳು ಇಲ್ಲಿನ ಜನರ ಆರೋಗ್ಯ ಮಾತ್ರವಲ್ಲ ಜೀವ ಕಳೆಯುವ ಮಟ್ಟಿಗೆ ಅಪಾಯಕಾರಿಯಾಗಿ ಬೆಳೆದು ನಿಂತಿವೆ. ಇದಕ್ಕೆ ಯಾರು ಹೊಣೆ? ಇದಕ್ಕೆ ಮತ್ತೆ ಮತ್ತೆ ನಮ್ಮ ಹಳ್ಳಿಗಳ ಮುಗ್ಧ ಜನರೇ ಹೊಣೆ ಎನ್ನುವ ಮಾತುಗಳನ್ನಾಡುವ ಅಧಿಕಾರಿಗಳು, ರಾಜಕಾರಣಿಗಳು ಮತ್ತಷ್ಟು ಕಾರ್ಖಾನೆಗಳ ವಿಸ್ತರಣೆ ಮಾಡಲು ಅನುವು ಮಾಡುತ್ತಿದ್ದಾರೆ. ಈಗ ಅವರು ಹಳ್ಳಿ ಜನರಿಗೆ ಕಿವಿಗೊಡುವುದೇ ಇಲ್ಲ. ನಾವು ಮನುಷ್ಯರಾಗಿ ಮತ್ತೊಬ್ಬರು ಬದುಕಲು ಅಡ್ಡಿಪಡಿಸುವುದು ಯಾವ ನ್ಯಾಯ. ಮಾನವ ಬಂಧುತ್ವ ಎನ್ನುವುದು ಪರಿಸರದ ಜೊತೆಗೆ ಕಾಣುವ ನಮ್ಮ ವೇದಿಕೆ ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ.‌ ನೀವು ಹಂಚಿಕೊಟ್ಟ ಯಾವುದೇ ಜವಾಬ್ದಾರಿಯನ್ನು ಮಾನವ ಬಂಧುತ್ವ ವೇದಿಕೆ ಸಂಪೂರ್ಣವಾಗಿ ಹೊತ್ತುಕೊಳ್ಳುತ್ತದೆ ಎಂದರು.

ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ ಕೇವಲ ಒಂದು ವಾರವಷ್ಟೇ ಸಮಯವಿದೆ. ಇದರಲ್ಲಿ ಜೀವ, ಆರೋಗ್ಯ ಬೇಕು ಎನ್ನುವ ಎಲ್ಲಾ ಪ್ರಜ್ಞಾವಂತರು, ಸ್ವಯಂ ಸೇವಾ ಸಂಸ್ಥೆಗಳು, ಸಂಘಟನೆಗಳು, ಧಾರ್ಮಿಕ ಸಂಸ್ಥೆ, ಸಮಾಜ, ಸಮುದಾಯ, ನಗರ, ಹಳ್ಳಿಯ ಹಿರಿಯರು ಪ್ರಚಾರದಲ್ಲಿ ತೊಡಗಿಕೊಂಡು, ಫೆ. 24, 2026 ಮಂಗಳವಾರ ಬೆಳಗ್ಗೆ 6 ಗಂ. ಸಂಜೆ 6 ಗಂ. ವರೆಗೆ ಕೊಪ್ಪಳ ಭಾಗ್ಯನಗರ ಬಂದ್ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಲು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.

ಮತ್ತೊಬ್ಬ ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕರಾದ ಭೀಮಪ್ಪ ಹವಳಿ ನೀರಿನ ಸೇವೆಯನ್ನು ಆ ದಿನ ಮಾನವ ಬಂಧುತ್ವ ವೇದಿಕೆ ಮಾಡುತ್ತದೆ ಎಂದರು.

ಧರಣಿ ನೇತೃತ್ವ ವಹಿಸಿದ್ದವರಲ್ಲಿ ಹಿರಿಯ ಸಾಹಿತಿ ಎ.ಎಂ.ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಎಸ್.ಬಿ.ರಾಜೂರು, ಜಿ.ಬಿ.ಪಾಟೀಲ, ಬಿ.ಜಿ.ಕರಿಗಾರ, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜಶೇಖರ ಏಳುಬಾವಿ, ಸುಭಾನ್ ಸಾಬ್ ನೀರಲಗಿ, ಗವಿಸಿದ್ದಪ್ಪ ಮಾಲಿಪಾಟೀಲ, ಮಹಾದೇವಪ್ಪ ಮಾವಿನಮಾಡು, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು ಜಿಲ್ಲಾ ಮಾನವ ಬಂಧುತ್ವ ವೆದಿಕೆಯ ಹನುಮಂತಪ್ಪ ಭಜಂತ್ರಿ, ರಣದಪ್ಪ ಸುಂಕಣ್ಣವರ, ಪ್ರೇಮಾ ಎಸ್. ಮುದಗಲ್, ಸೋನಾಕ್ಷಿ ಎಸ್‌. ಹುಲಿಯಾಪುರ, ಸಾವಿತ್ರಿ ಮುಜುಮದಾರ್, ಸೈನಾಜ್ ಬೇಗಂ ಎಚ್, ಹನುಮವ್ವ ಕಮತರ್, ಬಸವಂತಪ್ಪ ಚೌವ್ಹಾಣ, ಹೊನ್ನೂರಸಾಬ್ ನದಾಫ್, ಬೆಟ್ಟಪ್ಪ ಯತ್ನಟ್ಟಿ, ಶಂಭುಲಿಂಗಪ್ಪ ಹರಗೇರಿ, ಪ್ರದೀಪಕುಮಾರ ಹದ್ದಣ್ಣವರ್, ಹನುಮಂತ ಐಹೊಳೆ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande