
ಕೋಲಾರ, ೧೭ ಫೆಬ್ರವರಿ (ಹಿ.ಸ) :
ಆ್ಯಂಕರ್ : ಭಾರತದ ವಾಯುಯಾನ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಇಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಏರ್‌ಬಸ್ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕದ ವೇಮಗಲ್‌ನಲ್ಲಿ ದೇಶದ ಮೊದಲ ಖಾಸಗಿ ವಲಯದ 'ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕ'ವನ್ನು ಅಧಿಕೃತವಾಗಿ ಉದ್ಘಾಟಿಸಿವೆ.
ಈ ಉತ್ಪಾದನಾ ಘಟಕವು 'ಆತ್ಮನಿರ್ಭರ ಭಾರತ' ಅಭಿಯಾನಕ್ಕೆ ದೊಡ್ಡ ಬಲ ನೀಡಲಿದ್ದು, ಭಾರತದ ಖಾಸಗಿ ವಲಯವು ಮೊದಲ ಬಾರಿಗೆ ಅತ್ಯಾಧುನಿಕ ಹೆಲಿಕಾಪ್ಟರ್‌ಗಳ ತಯಾರಿಕೆ, ಪರೀಕ್ಷೆ ಮತ್ತು ನಿರ್ವಹಣೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿ ಉತ್ಪಾದನೆಯಾಗಲಿರುವ 'ಏರ್‌ಬಸ್ ಊ೧೨೫' ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ, ವಿಪತ್ತು ನಿರ್ವಹಣೆ ಹಾಗೂ ಸರ್ಕಾರದ 'ಉಡಾನ್' ಯೋಜನೆಯಡಿ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಸಾಧನವಾಗಲಿದೆ.
ಮೌಂಟ್ ಎವರೆಸ್ಟ್ ಶಿಖರದ ಮೇಲೆ ಇಳಿದ ಇತಿಹಾಸವಿರುವ ಊ೧೨೫ ಹೆಲಿಕಾಪ್ಟರ್, ಭಾರತದ ಸವಾಲಿನ ಹವಾಮಾನ ಮತ್ತು ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅತ್ಯಂತ ಸಮರ್ಥವಾಗಿದೆ.
ಈ ಘಟಕದಲ್ಲಿ ನಾಗರಿಕ ಆವೃತ್ತಿಯ ಜೊತೆಗೆ ಅದರ ಮಿಲಿಟರಿ ಆವೃತ್ತಿಯಾದ ಹೆಚ್೧೨೫ಎಂ ಅನ್ನು ಸಹ ತಯಾರಿಸುವ ಸಾಧ್ಯತೆಯಿದೆ. ಮೊದಲ 'ಮೇಡ್ ಇನ್ ಇಂಡಿಯಾ' ಹೆಲಿಕಾಪ್ಟರ್ ೨೦೨೭ರ ಆರಂಭದಲ್ಲಿ ಹೊರಬರುವ ನಿರೀಕ್ಷೆಯಿದ್ದು, ಇದನ್ನು ದಕ್ಷಿಣ ಏಷ್ಯಾದ ನೆರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗುವುದು. ಇದು ಟಾಟಾ ಮತ್ತು ಏರ್‌ಬಸ್ ನಡುವಿನ ಎರಡನೇ ಅತಿದೊಡ್ಡ ಸಹಭಾಗಿತ್ವವಾಗಿದ್ದು, ಈ ಹಿಂದೆ ಸಿ೨೯೫ (ಅ೨೯೫) ಮಿಲಿಟರಿ ವಿಮಾನ ಉತ್ಪಾದನಾ ಘಟಕಕ್ಕಾಗಿ ಇವು ಕೈಜೋಡಿಸಿದ್ದವು.
ಈ ಐತಿಹಾಸಿಕ ಯೋಜನೆಯನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ವರ್ಚುವಲ್ ಮಾಧ್ಯಮದ ಮೂಲಕ ಜಂಟಿಯಾಗಿ ಉದ್ಘಾಟಿಸಿದರು.
ಕೋಲಾರದ ವೇಮಗಲ್‌ನ ಉತ್ಪಾದನಾ ಸಂಕೀರ್ಣದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು, ಫ್ರಾನ್ಸ್ ಸರ್ಕಾರ ಸಶಸ್ತç ಪಡೆಗಳ ಸಚಿವೆ ಕ್ಯಾಥರೀನ್ ವಾಟ್ರಿನ್, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರ್, ಏರ್‌ಬಸ್ ಹೆಲಿಕಾಪ್ಟರ್ಸ್ ಸಿಇಒ, ಬ್ರೂನೋ ಈವೆನ್ ಭಾಗಿಯಾಗಿದರು.
ಚಿತ್ರ : ಕೋಲಾರ ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರಾಂಗಣದಲ್ಲಿ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಲೋಕಾರ್ಪಣೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್