ದಾಖಲೆ ಸಲ್ಲಿಸಲು ಲೇವಾದೇವಿಗಾರರಿಗೆ ಸೂಚನೆ
ಧಾರವಾಡ, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲೆಯಲ್ಲಿ 814 ಲೇವಾದೇವಿಗಾರರು, 112 ಗಿರವಿದಾರರು, 286 ಫೈನಾನ್ಸ ಕಾರ್ಪೊರೇಷನ್‍ಗಳು ಸೇರಿ ಒಟ್ಟು 1,212 ಲೇವಾದೇವಿಗಾರರು ಇದ್ದಾರೆ. ಈ ಪೈಕಿ 399 ಲೇವಾದೇವಿಗಾರರು, 04 ಗಿರವಿದಾರರು ಹಾಗೂ 162 ಪೈನಾನ್ಸ ಕಾರ್ಪೊರೇಷನ್‍ಗಳು ಸೇರಿ ಒಟ್ಟು 5
ದಾಖಲೆ ಸಲ್ಲಿಸಲು ಲೇವಾದೇವಿಗಾರರಿಗೆ ಸೂಚನೆ


ಧಾರವಾಡ, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲೆಯಲ್ಲಿ 814 ಲೇವಾದೇವಿಗಾರರು, 112 ಗಿರವಿದಾರರು, 286 ಫೈನಾನ್ಸ ಕಾರ್ಪೊರೇಷನ್‍ಗಳು ಸೇರಿ ಒಟ್ಟು 1,212 ಲೇವಾದೇವಿಗಾರರು ಇದ್ದಾರೆ. ಈ ಪೈಕಿ 399 ಲೇವಾದೇವಿಗಾರರು, 04 ಗಿರವಿದಾರರು ಹಾಗೂ 162 ಪೈನಾನ್ಸ ಕಾರ್ಪೊರೇಷನ್‍ಗಳು ಸೇರಿ ಒಟ್ಟು 565 ಸಂಸ್ಥೆಗಳು ಸಕ್ರಿಯವಾಗಿ ವ್ಯವಹಾರ ನಡಸುತ್ತಿಲ್ಲ ಹಾಗೂ 2020 ರ ಪೂರ್ವದಲ್ಲಿ ಈ ಸಂಸ್ಥೆಗಳು ಸಹಕಾರ ಇಲಾಖೆಯಿಂದ ಅನುಮತಿ ಪತ್ರವನ್ನು ನವೀಕರಣ ಮಾಡಿಸಿರುವುದಿಲ್ಲ. ಮತ್ತು ಸಹಕಾರ ಇಲಾಖೆಗೆ ಪ್ರತಿ ತಿಂಗಳು ಕಡ್ಡಾಯವಾಗಿ ಸಲ್ಲಿಸಬೇಕಾಗಿದ್ದ ಫಾರ್ಮ ನಂ. 6 ಮತ್ತು ಪ್ರತಿ ವರ್ಷ ಸಲ್ಲಿಸಬೇಕಿರುವ ಫಾರ್ಮ ನಂ. 7 ನ್ನು ಸಲ್ಲಿಸುವಲ್ಲಿ ವಿಫಲವಾಗಿವೆ.

ಆದಕಾರಣ ಕೂಡಲೇ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಧಾರವಾಡ ಡಾ. ಹಣಶೆಟ್ಟಿ ಬಿಲ್ಡಿಂಗ್, ಯುಬಿಹಿಲ್ ಧಾರವಾಡರಲ್ಲಿ ಹಾಜರಾಗಿ ಯಾವ ಕಾರಣಕ್ಕಾಗಿ ನವೀಕರಣ ಮಾಡಿಕೊಂಡಿರುವುದಿಲ್ಲ ಈ ಕುರಿತು ದಾಖಲಾತಿಗಳೊಂದಿಗೆ ಲಿಖಿತವಾಗಿ ಹೇಳಿಕೆ ನೀಡತಕ್ಕದ್ದು. ಇಲ್ಲವಾದಲ್ಲಿ ಇಲಾಖೆಯಿಂದ ಹೇಳಿಕೆ ಮತ್ತು ದಾಖಲೆಗಳನ್ನು ಸಲ್ಲಿಸದ ಸಂಸ್ಥೆಗಳ ಭದ್ರತಾ ಠೇವಣಿಯನ್ನು ಸರ್ಕಾರದ ನಿಯಮಾನುಸಾರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9901044400, 9964449347 ಗೆ ಸಂಪರ್ಕಿಸಬಹುದು ಎಂದು ಲೇವಾದೇವಿಗಾರರ ನಿಬಂದಕರು, ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂದಕರಾದ ನಿಂಗರಾಜ ಬೆಣ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande