ಕುರುಗೋಡು ಉತ್ಸವ ; ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಜಾನಪದ ಗಾಯನಕ್ಕೆ ಕುಣಿದು ಕುಪ್ಪಳಿಸಿದ ಜನತೆ
ಕುರುಗೋಡು, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕ ಖ್ಯಾತ ಜಾನಪದ ಗಾಯಕರಾದ ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಅವರ ಜಾನಪದ ಹಾಡುಗಳಿಗೆ ಕುರುಗೋಡು ಜನತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕುರುಗೋಡು ಉತ್ಸವದ ಅಂಗವಾಗಿ ಎರಡನೇ ದಿನ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ತಮ್ಮ ಹಾಡುಗಳ
ಕುರುಗೋಡು ಉತ್ಸವ ; ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಜಾನಪದ ಗಾಯನಕ್ಕೆ ಕುಣಿದು ಕುಪ್ಪಳಿಸಿದ ಜನತೆ


ಕುರುಗೋಡು, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕ ಖ್ಯಾತ ಜಾನಪದ ಗಾಯಕರಾದ ಮಾಲು ನಿಪ್ಪನಾಳ್, ಬಾಳು ಬೆಳಗುಂದಿ ಅವರ ಜಾನಪದ ಹಾಡುಗಳಿಗೆ ಕುರುಗೋಡು ಜನತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಕುರುಗೋಡು ಉತ್ಸವದ ಅಂಗವಾಗಿ ಎರಡನೇ ದಿನ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ತಮ್ಮ ಹಾಡುಗಳ ಮೂಲಕ ಕಿಚ್ಚು ಹಚ್ಚಿದರು.

ಮೊದಲಿಗೆ ಮಾಲು ನಿಪ್ಪನಾಳ್ ‘ನಾ.. ಡ್ರೈವರ, ನನ್ನ ಲವ್ವರ’ ಹಾಡು ಹೇಳುವ ಮೂಲಕ ಜಾನಪದ ಸಂಗೀತ ರಸದೌತಣ ಉಣಬಡಿಸಿದರು.

ಬಳಿಕ ಬಾಳು ಬೆಳಗುಂದಿ, ‘ಕುಣಿತಾಳೋ.. ಕುಣಿತಾಳೋ’ ಸಾಂಗ್ ಹೇಳುವ ಮೂಲಕ ನೋಡುಗರನ್ನು ಕುಣಿಯುವಂತೆ ಮೋಡಿ ಮಾಡಿದರು.

ಹಸಿ ಜಾನಪದ ಸಂಗೀತ ಹಾಡುಗಳಿಗೆ ಕುರುಗೋಡು ಜನತೆ ತಲೆದೂಗಿ ಸಂಗೀತ ಆಲಿಸಿದ್ದು ಕಂಡುಬಂದಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande