ಹೆಚ್‍ಐವಿ ಪೀಡಿತರಿಗೆ ಬೆಂಬಲಿಸಿ : ಗಿರೀಶ್
ಬಳ್ಳಾರಿ, 17 ಫೆಬ್ರವರಿ (ಹಿ.ಸ.) ಆ್ಯಂಕರ್ : ಹೆಚ್‍ಐವಿ ಪೀಡಿತ ವ್ಯಕ್ತಿಗಳೊಂದಿಗೆ ಮಾನವೀಯತೆಯಿಂದ ವರ್ತಿಸಿ ಅವರ ಮನೋಬಲವನ್ನು ಹೆಚ್ಚಿಸಬೇಕು ಎಂದು ಹೆಚ್‍ಐವಿ ಜಿಲ್ಲಾ ಮೇಲ್ವಿಚಾರಕ ಗಿರೀಶ್ ಅವರು ಹೇಳಿದ್ದಾರೆ. ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭ
ಹೆಚ್‍ಐವಿ ಪೀಡಿತರಿಗೆ ಬೆಂಬಲಿಸೋಣ : ಗಿರೀಶ್


ಹೆಚ್‍ಐವಿ ಪೀಡಿತರಿಗೆ ಬೆಂಬಲಿಸೋಣ : ಗಿರೀಶ್


ಬಳ್ಳಾರಿ, 17 ಫೆಬ್ರವರಿ (ಹಿ.ಸ.)

ಆ್ಯಂಕರ್ : ಹೆಚ್‍ಐವಿ ಪೀಡಿತ ವ್ಯಕ್ತಿಗಳೊಂದಿಗೆ ಮಾನವೀಯತೆಯಿಂದ ವರ್ತಿಸಿ ಅವರ ಮನೋಬಲವನ್ನು ಹೆಚ್ಚಿಸಬೇಕು ಎಂದು ಹೆಚ್‍ಐವಿ ಜಿಲ್ಲಾ ಮೇಲ್ವಿಚಾರಕ ಗಿರೀಶ್ ಅವರು ಹೇಳಿದ್ದಾರೆ.

ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ವತಿಯಿಂದ ಏಡ್ಸ್ ತಡೆ, ಹಾರೈಕೆ ಬೆಂಬಲ ಹಾಗೂ ಚಿಕಿತ್ಸೆ ಮತ್ತು ಸೇವೆಗಳ ಕುರಿತು ಮಂಗಳವಾರ ನಡೆದ ಜಾಗೃತಿ ಶಿಬಿರದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.

18 ವರ್ಷ ತುಂಬಿದವರು ರಕ್ತದಾನ ಮಾಡಿದರೆ ಅವರ ಆರೋಗ್ಯ ಅವರ ಆಯಸ್ಸು, ನೆನಪಿನ ಶಕ್ತಿ ವೃದ್ಧಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ರಕ್ತದಾನ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಇಸ್ಮಾಯಿಲ್ ಮಕಂದಾರ್, ಉಪನ್ಯಾಸಕರಾದ ಡಾ.ದಸ್ತಗಿರಿಸಾಬ್, ಬಸಪ್ಪ.ಕೆ., ಮಾರೆಪ್ಪ, ಡಾ.ಮಹಾಂತೇಶ್, ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande