ನಾಯಂಡಹಳ್ಳಿ ಬಳಿ ನೂತನ ರಸ್ತೆ ಮೇಲ್ಸೇತುವೆ ಉದ್ಘಾಟನೆ
ಬೆಂಗಳೂರು, 17 ಫೆಬ್ರವರಿ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ವಿಜಯನಗರ–ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನಿರ್ಮಿಸಲಾದ ನೂತನ ರಸ್ತೆ ಮೇಲ್ಸೇತುವೆಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಲೋಕಾರ್ಪಣೆಗೊಳಿಸಿದರು. ಈ ರಸ್ತೆ ಮೇಲ್ಸೇತುವೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್
Rob


ಬೆಂಗಳೂರು, 17 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ವಿಜಯನಗರ–ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನಿರ್ಮಿಸಲಾದ ನೂತನ ರಸ್ತೆ ಮೇಲ್ಸೇತುವೆಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಲೋಕಾರ್ಪಣೆಗೊಳಿಸಿದರು.

ಈ ರಸ್ತೆ ಮೇಲ್ಸೇತುವೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದು, ಇದೀಗ ಅದರ ಉದ್ಘಾಟನೆಯೊಂದಿಗೆ ವಿಜಯನಗರ ಹಾಗೂ ಪಾದರಾಯನಪುರ ಭಾಗದ ನಾಗರಿಕರಿಗೆ ಸಂಚಾರದಲ್ಲಿ ಮಹತ್ತರ ನೆರವು ದೊರೆಯಲಿದೆ. ರೈಲು ಗೇಟುಗಳ ಬಳಿ ಆಗಾಗ್ಗೆ ಉಂಟಾಗುತ್ತಿದ್ದ ಸಂಚಾರ ಸಮಸ್ಯೆಗೆ ಇದರಿಂದ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆಯಿದೆ.

ಕಾರ್ಯಕ್ರಮದಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಸಂಸದರಾದ ಪಿ. ಸಿ. ಮೋಹನ್, ರಾಜ್ಯ ಸಭಾ ಸಂಸದರಾದ ಲೆಹರ್ ಸಿಂಗ್, ವಿಜಯನಗರದ ಮಾಜಿ ಕಾರ್ಪೋರೇಟರ್ ಹೆಚ್. ರವೀಂದ್ರ ಸೇರಿದಂತೆ ರೈಲ್ವೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande