
ಕೋಲಾರ, ೧೭ ಫೆಬ್ರವರಿ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವನಿ ರಾಮಲಿಂಗೇಶ್ವರ ದೇವಾಲಯದ ಭ್ರಹ್ಮ ರಥೋತ್ಸವ ಜಾತ್ರೆ ಕರ್ನಾಟಕದ ಅತಿದೊಡ್ಡ ಜಾತ್ರೆ ಆಗಿದೆ. ಶಿವರಾತ್ರಿ ಮುಗಿದ ಎರಡು ದಿನಗಳ ನಂತರ ನಡೆದೆ ಭ್ರಹ್ಮ ರಥೋತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ರಥೋತ್ಸವದ ಮೇಲೆ ಬಾಳೆ ಹಣ್ಣು ಮತ್ತು ದವನ ಎಸೆದು ಭಕ್ತರು ಭಕ್ತಿಯಲ್ಲಿ ಮಿಂದರು. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಆವನಿಯನ್ನು ಪೌರಾಣಿಕವಾಗಿ ಆವಂತಿಕ ಕ್ಷೇತ್ರ ಎಂದು ಕರೆಯಲಾಗುತ್ತದೆ. ರಾಮ ಲಂಕೆಯನ್ನು ಗೆದ್ದು ಅಯೋದ್ಯೆಗೆ ಹಿಂತಿರುವ ಹಾದಿಯಲ್ಲಿ ಇಲ್ಲಿಗೆ ಬಂದಿದ್ದನ0ತೆ. ಲವ ಕುಶರ ಜನ್ಮಸ್ಥಳ ಎಂಬ ಪೌರಾಣಿಕ ನಂಬಿಕೆ ಇದೆ.
ಮುಳಬಾಗಿಲು ತಾಲ್ಲೂಕಿನ ಯಳಗೊಂಡಹಳ್ಳಿ ಗ್ರಾಮದ ಕಾಂತರಾಜ್ ಮಾತನಾಡಿ. ಪುರಾಣದಲ್ಲಿ ಆವನಿಯನ್ನು ಆವಂತಿಕ ಕ್ಷೇತ್ರ ಎಂದು ಕರೆಯಲಾಗುತ್ತದೆ. ಇಲ್ಲಿ ರಾಮನ ಲಿಂಗಸ್ವರೂಪದ ದೇವಾಲಯವಿದೆ. ಲವ ಕುಶರು ಇಲ್ಲೇ ಜನ್ಮ ತಾಳಿದರು ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಯಳಗೊಂಡಹಳ್ಳಿ ಗ್ರಾಮದ ಮೇಘನಾಥ್ ಮಾತನಾಡಿ ಶತಮಾನಗಳಿಂದ ಆವನಿ ರಥೋತ್ಸವ ನಡೆಯುತ್ತಿದೆ. ಈ ಹಿಂದೆ ರಥೋತ್ಸವದಲ್ಲಿ ಭಾಗವಹಿಸಲು ಜನರು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಧಣಿದವರಿಗೆ ಪಾನಕ, ನೀರು ಮಜ್ಜಿಗೆ ಹಾಗೂ ಕೋಸಂಬರಿ ನೀಡಿ ಉಪಚಾರ ಮಾಡಲಾಗುತ್ತಿತ್ತು. ಈ ಪರಂಪರೆಯನ್ನು ಯಳಗೊಂಡಹಳ್ಳಿ ಗ್ರಾಮದವರು ಇಂದಿಗೂ ಮುಂದುವರೆಸುತ್ತಾರೆ. ಆವನಿ ಜಾತ್ರೆಗೆ ತೆರಳುವ ಜನರು ಧಣಿವಾರಿಸಿಕೊಳ್ಳಲು ನೀರು ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ನೀಡಿ ಉಪಚರಿಸುವುದನ್ನು ಇಂದಿಗೂ ನಾವು ಮುಂದುವರೆಸಿದ್ದೇವೆ ಎಂದು ತಿಳಿಸಿದರು.
ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಕೆಂಪೇಗೌಡ ಮಾತನಾಡಿ ರಾಸುಗಳ ಮಾರಾಟ ಜಾತ್ರೆಯ ವಿಶೇಷವಾಗಿದೆ. ರೈತರು ಹಾಗೂ ಮಾರಾಟಗಾರರು ರಾಸುಗಳ ಮಾರಾಟದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ಅಲ್ಲದೆ ಇತರ ರಾಜ್ಯದ ಮಾರಾಟಗಾರರು ರಾಸುಗಳ ಖರೀದಿಗೆ ಆಗಮಿಸಿದ್ದಾರೆ. ಹಳ್ಳಿಕಾರ್ ಹೋರಿಗಳನ್ನು ಮಾರಾಟಕ್ಕೆ ತರಲಾಗಿದೆ. ಹಳ್ಳಿಕಾರ್ ಹೋರಿಗಳು ದೇಸಿ ರಾಸುಗಳ ಅಸ್ಮಿತೆ ಆಗಿದೆ ಎಂದು ತಿಳಿಸಿದರು.
ಚಿತ್ರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವನಿ ರಾಮಲಿಂಗೇಶ್ವರ ಬ್ರಹ್ಮರಥೋತ್ಸವ ಸಂಭ್ರಮದಿ0ದ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್