ಎಮ್ಮಿಗನೂರು ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ಮಠ ಜೀರ್ಣೋದ್ಧಾರಕ್ಕೆ ಪೂರ್ವಭಾವಿ ಸಭೆ
ಕಂಪ್ಲಿ, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ಮಠದ ಜೀರ್ಣೋದ್ಧಾರದ ಕುರಿತು ಮಠದ ಆವರಣದಲ್ಲಿ ಭಕ್ತಾಧಿಗಳ ಪೂರ್ವಭಾವಿ ಸಭೆ ಸೋಮವಾರ ನಡೆಯಿತು. ಗ್ರಾಮದ ಎಲ್ಲಾ ಸಮುದಾಯಗಳ ಮುಖಂಡರು ಹಾಗೂ ಭಕ್ತರು ಸಭೆಯಲ್ಲಿ ಪಾಲ್ಗೊಂಡ
ಕಂಪ್ಲಿ


ಕಂಪ್ಲಿ, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೇಸಿದ್ದೆಶ್ವರ ಸ್ವಾಮಿಯ ಮಠದ ಜೀರ್ಣೋದ್ಧಾರದ ಕುರಿತು ಮಠದ ಆವರಣದಲ್ಲಿ ಭಕ್ತಾಧಿಗಳ ಪೂರ್ವಭಾವಿ ಸಭೆ ಸೋಮವಾರ ನಡೆಯಿತು.

ಗ್ರಾಮದ ಎಲ್ಲಾ ಸಮುದಾಯಗಳ ಮುಖಂಡರು ಹಾಗೂ ಭಕ್ತರು ಸಭೆಯಲ್ಲಿ ಪಾಲ್ಗೊಂಡು, ಶ್ರೀಮಠದ ಅಭಿವೃದ್ಧಿ ಹಾಗೂ ನವೀಕರಣದ ಕುರಿತು ಚರ್ಚೆ ನಡೆಸಿದರು.

ಗ್ರಾಮದ ಮುಖಂಡರಾದ ಬೆರ್ಗಿ ಮಹೇಶಗೌಡ ಅವರು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮದ ಎಲ್ಲಾ ಭಕ್ತರು ಕೈಜೋಡಿಸಬೇಕು. ಎಲ್ಲರೂ ಒಗ್ಗೂಡಿ ಶ್ರೀಜಡೇಸಿದ್ಧೇಶ್ವರ ಸ್ವಾಮಿಯ ಅಭಿವೃದ್ಧಿಗಾಗಿ ನೂತನ ಸಮಿತಿಯನ್ನು ರಚಿಸಿ, ಸ್ವಾಮಿಯ ನೂತನ ರಥ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಈ ಸಭೆಯಲ್ಲಿ ಸದ್ಭಕ್ತರಾದ ಘನಮಠಸ್ವಾಮಿ, ಎಚ್. ರುದ್ರಪ್ಪ, ಎಮ್ಮೆ ತಿಪ್ಪಯ್ಯ, ಮೀನುಕೆರೆ ಶೇಖಣ್ಣ, ಬಜಾರ್ ವೆಂಕಟೇಶ, ಆಗಲೂರು ಬಸಪ್ಪ, ವಡ್ಡರ ವೀರೇಶ್, ನಾಯಕರ ಸಿದ್ದಪ್ಪ, ಟಿ.ಪಿ. ಜಡೆಪ್ಪ, ಹೆಬ್ಬಟ್ಟದ ರಾಮಾಂಜಿನಿ, ನಾಗರೆಡ್ಡಿ, ಎಳ್ಳಾರ್ಥಿ ರಾಘವೇಂದ್ರರೆಡ್ಡಿ, ಮಾರವಾಡಿ ಗಾದಿಲಿಂಗಪ್ಪ, ಕಾಗಿ ಈರಣ್ಣ ಸೇರಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande