
ಬಳ್ಳಾರಿ, 16 ಫೆಬ್ರವರಿ (ಹಿ.ಸ.)
ಆ್ಯಂಕರ್: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ
ನೇಮಕಾತಿಯಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಮತ್ತು ಕಲ್ಯಾಣ ಕರ್ನಾಟಕ (371ಜೆ)ದ ಅಭ್ಯರ್ಥಿಗಳಿಗೆ ಶೇ.25ರಷ್ಟು ಮೀಸಲು ಮಾಡಿ ಅಧಿಸೂಚನೆ ಪ್ರಕಟಿಸಿದ್ದನ್ನು ಹಿಂಪಡೆದು ಶೇ. 100 ರಷ್ಟು ಸ್ಥಳೀಯರಿಗೆ ಉದ್ಯೋಗ ಮೀಸಲು ಮಾಡಲು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಊಳೂರು ಸಿದ್ದೇಶ್ ಅವರು ಮನವಿ ಸಲ್ಲಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಊಳೂರು ಸಿದ್ದೇಶ್ ಅವರು, ಪ್ರಸ್ತುತ ಪ್ರಕಟವಾಗಿರುವ ಅಧಿಸೂಚನೆಯಂತೆ ಹೈದರಾಬಾದ್ - ಕರ್ನಾಟಕ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಸಿಗಬೇಕಿದೆ. ಬಳ್ಳಾರಿಯೂ ಹೈದರಾಬಾದ್ - ಕರ್ನಾಟಕ ವ್ಯಾಪ್ತಿಯಲ್ಲಿದ್ದು, ಶೇ. 25ರ ಬದಲಿಗದೆ, ಶೇ. 100 ರಷ್ಟು ಮೀಸಲಾತಿ ಜಾರಿ ಆದಲ್ಲಿ ಈ ಭಾಗದವರಿಗೆ ಎಲ್ಲಾ ಹುದ್ದೆಗಳು ಸಿಗಲಿವೆ ಎಂದರು
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್